Urdu   /   English   /   Nawayathi

1300 ಮಂದಿಯ ಬಲಿ ಪಡೆದಿದ್ದ ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿ ಮತ್ತೆ ಸ್ಫೋಟ!

share with us

ಜಕಾರ್ತಾ: 03 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಮೌಂಟ್ ಮೆರಾಪಿ ಮಂಗಳವಾರ ಸ್ಫೋಟಗೊಂಡು, ಆರು ಕಿ.ಮೀ ಎತ್ತರಕ್ಕೆ ದಟ್ಟ ಬೂದಿ ಚಿಮ್ಮಿರುವುದರಿಂದ ವಿಮಾನಗಳ ಹಾರಾಟಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಾವಾ ಮುಖ್ಯ ದ್ವೀಪದಲ್ಲಿನ ಮೆರಾಪಿ ಪರ್ವತದ ಸ್ಫೋಟವನ್ನು ಜ್ವಾಲಾಮುಖಿ ಕುಳಿಯಿಂದ ಎರಡು ಕಿ.ಮೀ. ದೂರದಲ್ಲಿ ಪತ್ತೆ ಮಾಡಲಾಗಿದೆ. ಜ್ವಾಲಾಮುಖಿಯು ಅಪಾಯಕಾರಿ ಜ್ವಾಲಾಮುಖಿ ಅನಿಲ ಮತ್ತು ಬಿಸಿ ಮೋಡಗಳನ್ನು ಸೃಷ್ಟಿಸಿದೆ ಎಂದು ಇಂಡೋನೇಷ್ಯಾ ಭೂವೈಜ್ಞಾನಿಕ ವಿಪತ್ತು ಸಂಸ್ಥೆಯ ಮುಖ್ಯಸ್ಥ ಹನಿಕ್ ಹುಮೈದಾ ಹೇಳಿದ್ದಾರೆ. ಜ್ವಾಲಾಮುಖಿ ಕುಳಿಯಿಂದ ಮೂರು ಕಿ.ಮೀ ದೂರದಲ್ಲಿರುವ ಹಳ್ಳಿಗಳ ಮೇಲೆ ಬೂದಿ ಮತ್ತು ಮರಳಿನ ಮಳೆ ಸುರಿದಿದ್ದು, ಕುಳಿಯಿಂದ 10 ಕಿ.ಮೀ ದೂರದಲ್ಲಿರುವ ಉತ್ತರದ ಪ್ರಾಂತ್ಯಗಳಲ್ಲೂ ಬೂದಿಯ ಮಳೆ ಬಿದ್ದಿದೆ ಎಂದು ಹುಮೈದಾ ಹೇಳಿದ್ದಾರೆ. ಇನ್ನುಪ್ರಸ್ತುತ ಸ್ಫೋಟಗೊಂಡಿರುವ ಮೌಂಟ್ ಮೆರಾಪಿ ಜ್ವಾಲಾಮುಖಿಯ ಸುತ್ತಮುತ್ತಲಿನ ಸುಮಾರು 3 ಕಿಮೀ ವ್ಯಾಪ್ತಿಯಲ್ಲಿನ ನಿವಾಸಿಗಳು ಕೂಡಲೇ ಮನೆ ಖಾಲಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ. ಅಲ್ಲದೆ ಖುದ್ಧು ಸ್ಥಳೀಯ ಆಡಳಿತ ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಸುತ್ತಿದೆ. 2010ರಲ್ಲಿ ಕೊನೆಯ ಬಾರಿಗೆ ಈ ಮೌಂಟ್ ಮೆರಾಪಿ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಈ ವೇಳೆ ಸುಮಾರು 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, 2 ಲಕ್ಷದ 80 ಸಾವಿರ ಮಂದಿ ನಿರಾಶ್ರಿತರಾಗಿದ್ದರು. 1930ರಲ್ಲಿ ಈ ಮೌಂಟ್ ಮೆರಾಪಿ ಜ್ವಾಲಾಮುಖಿ ಅತ್ಯಂತ ದೊಡ್ಡ ಅನಾಹುತ ಸೃಷ್ಟಿ ಮಾಡಿತ್ತು. ಈ ವೇಳೆ 1300 ಮಂದಿ ಬಲಿಯಾಗಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا