Urdu   /   English   /   Nawayathi

ಯಡಿಯೂರಪ್ಪ ವೀಕೆಸ್ಟ್ ಮುಖ್ಯಮಂತ್ರಿ: ವಿಪಕ್ಷ ನಾಯಕ ಸಿದ್ದರಾಮಯ್ಯ

share with us

ಕಲಬುರಗಿ: 24 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಸಚಿವ ಸ್ಥಾನ ಸಿಗಲಿಲ್ಲವೆಂದು ಬಿಜೆಪಿಯಲ್ಲಿ ಅಸಮಾಧಾನ ಶುರುವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಶಾಸಕರು ಬಿಜೆಪಿ ಬಿಟ್ಟು ಬರುವುದರಿಂದ ಕಾಂಗ್ರೆಸ್ ಪಕ್ಷಕ್ಕೇನೂ ಲಾಭವಿಲ್ಲವಾದರೂ ಬಿಜೆಪಿಗೆ ನಷ್ಟವಾಗೋದು ಖಚಿತ. ಸರ್ಕಾರದಲ್ಲಿ ಯಾವಾಗ ಬೇಕಾದರೂ ಅಸಮಾಧಾನ ಸ್ಫೋಟಗೊಳ್ಳಬಹುದು, ಇದು ಬಿಜೆಪಿ ನಾಯಕರಲ್ಲಿ ತಳಮಳ ಸೃಷ್ಟಿಸಿದೆ. ಕೆಲ ಶಾಸಕರು ಬಿಜೆಪಿ ತೊರೆದು ಬೇರೆ ಪಕ್ಷ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿಯ 32 ಶಾಸಕರು ಕಾಂಗ್ರೆಸ್ ಗೆ ಬರ್ತಾರೆ ಎಂಬ ಮಾತನ್ನು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೂ ಗೊತ್ತಿಲ್ಲ, ಅವರ ಹೇಳಿಕೆ ಸತ್ಯವೂ ಆಗಬಹುದು ಅಥವಾ ಆಗದೇ ಇರಬಹುದು ಎಂದರು.

ಭಾರತಕ್ಕೆ ಟ್ರಂಪ್ ಆಗಮನದಿಂದ ಏನೂ ಲಾಭ ಆಗಲ್ಲ: ಒಂದು ದೇಶದ ಅಧ್ಯಕ್ಷ ಬರ್ತಿದ್ದಾರೆ. ಅವರನ್ನು ಸ್ವಾಗತ ಮಾಡ್ತಿದ್ದಾರೆ. ಒಳ್ಳೆಯ ಸ್ವಾಗತ ಮಾಡೋದು ನಮ್ಮ ಕರ್ತವ್ಯ, ಶಿಷ್ಟಾಚಾರದ ಪ್ರಕಾರ ಸ್ವಾಗತ ಮಾಡಬೇಕು. ಆದ್ರೆ ಅದು ಅಗತ್ಯಕ್ಕಿಂತ ಆಡಂಬರ ಹೆಚ್ಚಾಗಿದೆ ಎಂದ ಸಿದ್ದರಾಮಯ್ಯ, ಯಾವುದೇ ಆಮದು ಒಪ್ಪಂದಕ್ಕೆ ಮುಂದಾಗಬಾರದು ಎಂದು ಆಗ್ರಹಿಸಿದರು. ಇದೇ ವೇಳೆ ರಾಹುಲ್ ಗಾಂಧಿಯೇ ಮತ್ತೆ ಎಐಸಿಸಿ ಅಧ್ಯಕ್ಷ ರಾಗಬೇಕೆಂಬುದು ನನ್ನ ಆಸೆ ಎಂದು ಹೇಳಿದ ಅವರು, ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಶೀಘ್ರದಲ್ಲಿ ಆಗುತ್ತದೆ ಎಂದ್ರು. ಸಿದ್ದರಾಮಯ್ಯ ಹೊಸ ಪಕ್ಷ ಪ್ರಾರಂಭಿಸ್ತಾರೆ ಅನ್ನೋ ಕಟೀಲ್ ಹೇಳಿಕೆ ವಿಚಾರವಾಗಿ ಕಟೀಲ್ ಗೆ ರಾಜಕೀಯ ಅನುಭವ ಕಡಿಮೆ ಅವರ ಮಾತಿಗೆ ನಾನು ರಿಯಾಕ್ಟ್ ಮಾಡಲ್ಲಾ ಎಂದು ಹೇಳಿದರು.

ಅನುದಾನ ಹಂಚಿಕೆಯಲ್ಲಿ ಅನ್ಯಾಯ: 15 ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ. ಈ ವರ್ಷ ಒಂಬತ್ತು ಸಾವಿರ ಕೋಟಿ ಕಡಿಮೆಯಾಗಿದೆ. ಮುಂದಿನ ವರ್ಷ 11258 ಕೋಟಿ ಕಡಿಮೆಯಾಗಲಿದೆ. 5 ವರ್ಷದಲ್ಲಿ ರಾಜ್ಯಕ್ಕೆ ಸುಮಾರ 60 ಸಾವಿರ ಕೋಟಿ ರೂಪಾಯಿ ಅನುದಾನ ನಷ್ಟವಾಗಲಿದೆ. ಯಡಿಯೂರಪ್ಪ ಮತ್ತು ಇಪ್ಪತ್ತೈದು ಜನ ಎಂಪಿಗಳು ಏನು ಮಾಡ್ತಿದ್ದಾರೆ?. ಇದರ ಬಗ್ಗೆ ಯಾರದ್ರೂ ಧ್ವನಿ ಎತ್ತುತ್ತಿದ್ದಾರಾ?, ಪ್ರವಾಹ ಬಂದಾಗಲೂ ಹೆಚ್ಚಿನ ಪರಿಹಾರ ನೀಡಲಿಲ್ಲ. ನಿಯೋಗ ಕರೆದುಕೊಂಡು ಯಡಿಯೂರಪ್ಪ ಹೋಗಲಿಲ್ಲ, ಮೋದಿ ಮತ್ತು ಅಮಿತ್ ಶಾ ಅವರಿಗೆ ಯಡಿಯೂರಪ್ಪ ಹೆದರುತ್ತಿದ್ದಾರೆ. ಯಡಿಯೂರಪ್ಪ ವೀಕೆಸ್ಟ್ ಮುಖ್ಯಮಂತ್ರಿ ಇವರಿಂದ ಏನೂ ಮಾಡಲು ಆಗೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا