Urdu   /   English   /   Nawayathi

ಪ್ರೇಮಸೌಧಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್​ ಭೇಟಿ... ತಾಜ್​ಮಹಲ್​ಗೆ ಡೊನಾಲ್ಡ್ ಕೊಟ್ಟ ಹೊಸ ಟೈಟಲ್​ ಇದು​!

share with us

ಆಗ್ರಾ: 24 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​,ಹೆಂಡತಿ ಮೆಲಾನಿಯಾ ಹಾಗೂ ಮಗಳು ಇವಾಂಕಾ ಐತಿಹಾಸಿಕ ತಾಜ್​ ಮಹಲ್​ಗೆ ಭೇಟಿ ನೀಡಿದರು. ಮೊಟೆರಾ ಸ್ಟೇಡಿಯಂನಲ್ಲಿ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ನೇರವಾಗಿ ಆಗ್ರಾಕ್ಕೆ ಬಂದಿಳಿದ ಟ್ರಂಪ್​ ಕುಟುಂಬ ಪ್ರೇಮ ಸ್ಮಾರಕ ತಾಜ್​ಮಹಲ್​ ವೀಕ್ಷಣೆ ಮಾಡಿ ಕ್ಯಾಮೆರಾಗೆ ಪೋಜ್​ ನೀಡಿದರು. ಇದಾದ ಬಳಿಕ ವಿಸಿಟರ್​ ಬುಕ್​​ನಲ್ಲಿ ತಾಜ್​ ಮಹಲ್​ ಭಾರತದ ವೈವಿಧ್ಯತೆಯ ಅನಂತತೆಯ ಪ್ರತೀಕ. ನಾವು ಭಾರತೀಯ ಸಂಸ್ಕೃತಿಯನ್ನ ಪ್ರೀತಿಸುತ್ತೇವೆ ಎಂದು ಬರೆದಿದ್ದಾರೆ. ಇದೇ ವೇಳೆ ಇದೊಂದು ಸಾವಿಲ್ಲದ ಸ್ಮಾರಕ ಎಂದು ಬಣ್ಣಿಸಿದರು.

ತಾಜ್​ ಮಹಲ್​ ಬಗ್ಗೆ ಗೈಡ್​ವೊಬ್ಬರು ಇವರಿಗೆ ಮಾಹಿತಿ ನೀಡಿದ್ದು, ಈ ಸ್ಥಳದಲ್ಲಿ ಸುಮಾರು 45ಕ್ಕೂ ಹೆಚ್ಚು ನಿಮಿಷಗಳ ಕಾಲ ಟ್ರಂಪ್​ ಸಮಯ ಕಳೆದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا