Urdu   /   English   /   Nawayathi

ಹಿಂದೂ ಧರ್ಮಕ್ಕೆ ಗಂಡಾಂತರ ಬಂದಿದ್ರೆ ಅದು ಮೋದಿಯಿಂದ್ಲೇ.. ಸಿಎಂ ಇಬ್ರಾಹಿಂ

share with us

ಬಳ್ಳಾರಿ: 23 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಮೊಘಲರು, ಬ್ರಿಟಿಷರು ಹಾಗೂ ಕಾಂಗ್ರೆಸ್ ಸರ್ಕಾರ ಈ ದೇಶದಲ್ಲಿ ಆಳ್ವಿಕೆ ನಡೆಸಿದಾಗ ಹಿಂದೂ ಧರ್ಮಕ್ಕೆ ಯಾವುದೇ ಗಂಡಾಂತರ ಇರಲಿಲ್ಲ. ಆದರೀಗ ಪ್ರಧಾನಿ ಮೋದಿ ಸರ್ಕಾರದ ಆಳ್ವಿಕೆಯಲ್ಲಿ ಏತಕ್ಕೆ ಹಿಂದೂ ಧರ್ಮಕ್ಕೆ ಗಂಡಾಂತರ ಬಂತು ಎಂದು ಎಂಎಲ್​ಸಿ ಸಿಎಂ ಇಬ್ರಾಹಿಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಜಿಲ್ಲೆಯ ಸಂಡೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, 800 ವರುಷಗಳ ಕಾಲ ಮೊಘಲರು, 200 ವರುಷಗಳ ಕಾಲ ಬ್ರಿಟಿಷರು, ಅರವತ್ತು ವರುಷಗಳ ಕಾಲ ಕಾಂಗ್ರೆಸ್ ಹಾಗೂ ಐದು ವರ್ಷಗಳ ಕಾಲ ವಾಜಪೇಯಿ ಸರ್ಕಾರ ಈ ದೇಶ ಆಳ್ವಿಕೆ ನಡೆಸಿದೆ. ಆಗ ಇರದ ಈ ಗಂಡಾಂತರ, ಈಗ ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಏಕೆ ಗಂಡಾಂತರ ಪದ ಮುನ್ನೆಲೆಗೆ ಬಂತು ಎಂದು ಸಿ ಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ. ಮೋದಿ ಬಂದ್ಮೇಲೆ ಗಂಡಾಂತರ ಹಿಂದೂ ಧರ್ಮಕ್ಕೆ ಬಂದೈತಿ ಅಂದ್ಮೇಲೆ ಯಾರು ಹೋಗ್ಬೇಕು, ಮೋದಿನೇ ಹೋಗ್ಬೇಕು. ಹಿಂದೂ ಧರ್ಮಕ್ಕೆ ಗಂಡಾಂತರ ಯಾರಿಂದಲೂ ಬಂದಿಲ್ಲ. ಮುಂದೆಯೂ ಬರಲ್ಲ ಎಂದು ಸ್ಪಷ್ಟಪಡಿಸಿದ್ರು. ಸಚಿವ ಸಿ ಟಿ ರವಿ ಕ್ಯಾಸಿನೋ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಅವರು, ಅದು ಅವರ ಸಂಸ್ಕೃತಿ ತೋರಿಸುತ್ತದೆ. ಮೊದ್ಲು 50 ಪಾಕೇಟ್ ಕೊಡುತ್ತಿದ್ರು. ಈಗ 200 ಬಾಟಲ್ ಕುಡಿದರೂ ಕಿಕ್ ಹೊಡಿತಿಲ್ಲ. ಕೊನೆಗೆ ಜನರ ಪಂಚೆ ಉಳಿಸ್ತಾರೋ ಇಲ್ಲವೋ ಗೊತ್ತಿಲ್ಲ. ಜೈಶ್ರೀರಾಮ್ ಎಂದು ಮಾಲೆ‌ ಹಾಕುವವರು ಇವರು, ದತ್ತಾತ್ರೇಯ ಮಾಲೆ ಹಾಕಿ ಕ್ಯಾಸಿನೋ ಮಾಡಲು ಸಂಕಲ್ಪ ಮಾಡಿದ್ರಾ? ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು. ಅಬಕಾರಿ ಸಚಿವ ನಾಗೇಶ, ಮನೆ ಮನೆಗೆ ಹೆಂಡ ಸರಬರಾಜು ಮಾಡ್ತೇವೆ ಎನ್ನುತ್ತಾರೆ. ಧರ್ಮ, ಭಾಷೆ ಹೆಸರಿನಲ್ಲಿ ಮತ ಕೇಳುವವರು ಹೇಡಿಗಳು. ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಆದರೆ, ಕೇಂದ್ರ ಸರ್ಕಾರ ಹಣ ಕೊಡುತ್ತಿಲ್ಲ ಎಂದು ದೂರಿದ್ರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا