Urdu   /   English   /   Nawayathi

ಛತ್ತೀಸ್​ಗಢದಲ್ಲಿ 5 ಕೆಜಿ ಸ್ಪೋಟಕ ಪತ್ತೆ, ತಕ್ಷಣ ನಿಷ್ಕ್ರಿಯ: ತಪ್ಪಿದ ಭಾರಿ ಅನಾಹುತ

share with us

ಛತ್ತೀಸ್​ಗಢ: 18 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಸಿಆರ್​ಪಿಎಫ್​ ಸಿಬ್ಬಂದಿ ಇಂದು(ಫೆ.18) ಬೆಳಗ್ಗೆ 5 ಕೆ.ಜಿ ಸ್ಪೋಟಕವನ್ನು ಪತ್ತೆ ಹಚ್ಚಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಲ್ಲಿನ ಕೊಂಡಗಾಂವ್‌ನ ಬತ್ರಾಲಿ ಹಾಗೂ ಬಾವ್ನಮರಿ ಗ್ರಾಮದ ಮಧ್ಯೆ ಈ ಸ್ಪೋಟಕವನ್ನು ಇರಿಸಲಾಗಿತ್ತು. ತಕ್ಷಣ ನಿಷ್ಕ್ರಿಯಗೊಳಿಸಿದ ಸಿಆರ್​ಪಿಎಫ್​ ಸಿಬ್ಬಂದಿ, ಭಾರಿ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಸ್ಪೋಟಕ ಇರಿಸಿದ ಉದ್ದೇಶ ಹಾಗೂ ಭಾಗಿಯಾದ ಸಂಘಟನೆಗಳ ಪತ್ತೆಗೆ ಮುಂದಾಗಿದೆ. ಒಬ್ಬ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 4 ಮೊಬೈಲ್, ಪವರ್​ ಶೆಲ್​ಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا