Urdu   /   English   /   Nawayathi

ವೋಲ್ವೋ ಬಸ್-ಫಾರ್ಚುನರ್ ಕಾರು ಡಿಕ್ಕಿ: 6 ಜನ ಸಾವು, ಹಲವರಿಗೆ ಗಾಯ

share with us

ಕಾನ್ಪುರ (ಉತ್ತರ ಪ್ರದೇಶ): 18 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ವೋಲ್ವೋ ಬಸ್ ಮತ್ತು ಫಾರ್ಚುನರ್ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಆರು ಜನ ಜನ ಸಾವಿಗೀಡಾಗಿ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಕಾನ್ಪುರದ ಬಿಲ್ಹೌರ್​​​ನಲ್ಲಿ ನಡೆದಿದೆ. ಬಿಲ್ಹೌರ್​​​ನ ಮಕನ್‌ಪುರದ ಆಗ್ರಾ ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದ ಸ್ಥಳದಲ್ಲಿ ಬಸ್‌ನ ಚಾಲಕ ಸೇರಿ, ಕಾರಿನಲ್ಲಿ ಮೃತಪಟ್ಟ ಐವರು ದೇಹ ಪತ್ತೆಯಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا