Urdu   /   English   /   Nawayathi

ಶಾಲೆಯ ನಾಲ್ಕು ಕೊಠಡಿ ತೆರವಿಗೆ ಆದೇಶ

share with us

ಭಟ್ಕಳ: 17 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಮುರ್ಡೆಶ್ವರದ ಕೆರೆಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ 4 ಕೋಣೆಗಳನ್ನು ತೆರವುಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಮಹ್ಮದ್ ರೋಶನ್ ಆದೇಶಿಸಿದ್ದಾರೆ. 1935ರಲ್ಲಿ ಸ್ಥಾಪನೆಗೊಂಡ ಈ ಕೆರೆಕಟ್ಟೆ ಶಾಲೆ ಮುರ್ಡೆಶ್ವರ ರಸ್ತೆಯಂಚಿನಲ್ಲಿದ್ದು, ನಾಲ್ಕು ಕೋಣೆಗಳನ್ನು ಹೊಂದಿದೆ. 3 ಕಟ್ಟಡಗಳ ಪೈಕಿ 1 ಕಟ್ಟಡವು 1999-2000ರಲ್ಲಿ (2 ಕೋಣೆ), ಇನ್ನೊಂದು ಕೋಣೆಯು 2001-2002ರಲ್ಲಿ ಹಾಗೂ ಮತ್ತೊಂದು ಕೋಣೆ 2012ರಲ್ಲಿ ನಿರ್ವಣವಾಗಿತ್ತು. ಸದರಿ ಶಾಲೆ ಕೋಣೆಗಳು ಅಪಾಯ ವಲಯದಲ್ಲಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳುತ್ತಿರುವುದಾಗಿ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ 142 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿದ್ದು, ಒಬ್ಬರು ಅತಿಥಿ ಶಿಕ್ಷಕರು ಸೇರಿ 7 ಶಿಕ್ಷಕರು ಇದ್ದಾರೆ. ಕಟ್ಟಡ ತೆರವಿಗೆ ಪಾಲಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಶಾಲೆಯಲ್ಲಿ ಶನಿವಾರ ಪಾಲಕರ ಸಭೆ ನಡೆಸಿದರು. ಮುರ್ಡೆಶ್ವರ ರಸ್ತೆ ಸುಧಾರಣೆ ಹೆಸರಿನಲ್ಲಿ ಬಡವರ ಅಂಗಡಿಗಳು, ಬಡವರ ಮಕ್ಕಳು ಓದುತ್ತಿರುವ ಶಾಲೆಯನ್ನಷ್ಟೇ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ, ಶ್ರೀಮಂತರ ವಿಷಯದಲ್ಲಿ ಅಧಿಕಾರಿಗಳು ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಭೆಯಲ್ಲಿ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯೊಂದಿಗೆ ಸ್ಥಳೀಯರಿಗೆ ಭಾವನಾತ್ಮಕ ಸಂಬಂಧವಿದ್ದು, ಅದನ್ನು ತೆರವುಗೊಳಿಸುವುದಕ್ಕೆ ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದರು. ಆದರೆ, ಹಿರಿಯ ಅಧಿಕಾರಿಗಳ ಆದೇಶ ಪಾಲನೆಯ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ಸಭೆಗೆ ತಿಳಿಸಿದರು. ಮಕ್ಕಳ ವಾರ್ಷಿಕ ಪರೀಕ್ಷೆ ಮುಗಿಯುವವರೆಗಾದರೂ ಕಟ್ಟಡ ತೆರವಿಗೆ ಮುಂದಾಗಬಾರದು ಎಂದು ಸಭೆಯಲ್ಲಿ ಪಾಲಕರು ಮನವಿ ಮಾಡಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا