Urdu   /   English   /   Nawayathi

ಎರಡು ಶತಕೋಟಿ ದಾಟಿದ ವಾಟ್ಸ್​ಆ್ಯಪ್​​ ಬಳಕೆದಾರರ ಸಂಖ್ಯೆ!

share with us

ಸ್ಯಾನ್ ಫ್ರಾನ್ಸಿಸ್ಕೋ: 13 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಸೇವೆ ವಾಟ್ಸ್​ಆ್ಯಪ್​​ ಬುಧವಾರ ವಿಶ್ವದಾದ್ಯಂತ ಎರಡು ಶತಕೋಟಿಗೂ ಹೆಚ್ಚು ಬಳಕೆದಾರರನ್ನು ತನ್ನದಾಗಿಸಿಕೊಂಡಿದೆ. 2014 ರಲ್ಲಿ ಫೇಸ್‌ಬುಕ್ ಸ್ವಾಧೀನಪಡಿಸಿಕೊಂಡಿರುವ ವಾಟ್ಸ್​ಆ್ಯಪ್​​, ಫೇಸ್‌ಬುಕ್ ಕುಟುಂಬದ ಅಪ್ಲಿಕೇಶನ್‌ಗಳಲ್ಲಿ ಹೆಚ್ಚು ಬಳಕೆಯಾಗುವ ಸೇವೆಗಳಲ್ಲಿ ಒಂದಾಗಿದೆ. ವಾಟ್ಸ್​ಆ್ಯಪ್​​ ​ನಲ್ಲಿ ಕರೆ ಮತ್ತು ವೀಡಿಯೊ ಕರೆಗಳ ಜೊತೆಗೆ ಉಚಿತ ಮೆಸೇಜ್​ ಸಹ ಮಾಡಬಹುದು. ಒಂದು ಕಾಲದಲ್ಲಿ ಮುಖಾಮುಖಿಯಾಗಿ ಮಾತ್ರ ಸಾಧ್ಯವಿರುವ ಖಾಸಗಿ ಸಂಭಾಷಣೆಗಳು ಈಗ ಎಷ್ಟೇ ದೂರವಿದ್ದರೂ ತ್ವರಿತ ಚಾಟ್‌ಗಳು ಮತ್ತು ವೀಡಿಯೊ ಕರೆಗಳ ಮಾಡಬಹುದಾಗಿದೆ ಎಂದು ವಾಟ್ಸ್​ಆ್ಯಪ್​​ ಬ್ಲಾಗ್ ಪೋಸ್ಟ್ ಹೇಳಿದೆ. ವಾಟ್ಸ್​ಆ್ಯಪ್​​ ಬಳಕೆದಾರರ ಭದ್ರತೆಗೆ ಬದ್ಧವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا