Urdu   /   English   /   Nawayathi

'109 ಯುಎಸ್ ಸೈನಿಕರಿಗೆ ಆಘಾತಕಾರಿ ಮೆದುಳಿನ ಸಮಸ್ಯೆ': ಕಾರಣ?

share with us

ವಾಷಿಂಗ್ಟನ್: 12 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಆಘಾತಕಾರಿ ಮೆದುಳಿನ ಸಮಸ್ಯೆಗಳಿಂದ (ಟಿಬಿಐ) ಬಳಲುತ್ತಿರುವ ಯುಎಸ್ ಸೇವಾ ಸದಸ್ಯರ ಸಂಖ್ಯೆ 100ಕ್ಕಿಂತಲೂ ಹೆಚ್ಚಿದೆ ಎಂದು ಪೆಂಟಗನ್ ಸೋಮವಾರ ತಿಳಿಸಿದೆ. ಕಳೆದ ತಿಂಗಳು ಇರಾಕ್​ನಲ್ಲಿರುವ ಯುಎಸ್​ ಸೇನಾನೆಲೆಗಳ ಮೇಲೆ ಇರಾನಿನ ಕ್ಷಿಪಣಿ ದಾಳಿಯ ಪರಿಣಾಮದಿಂದ ಹೆಚ್ಚಿನ ಸೈನಿಕರು ಈ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈವರೆಗೆ 109 ಮಿಲಿಟರಿ ಸದಸ್ಯರು ಟಿಬಿಐಗೆ ಚಿಕಿತ್ಸೆ ಪಡೆದಿದ್ದಾರೆ ಎಂದು ಇಲಾಖೆ ತಿಳಿಸಿದೆ. ಕಳೆದ ಒಂದು ವಾರದಲ್ಲಿ 64 ಜನರು ಚಿಕಿತ್ಸೆ ಪಡೆದಿರುವ ವರದಿಯಾಗಿದೆ. ಇರಾಕ್‌ನ ಅಲ್-ಅಸಾದ್ ವಾಯುನೆಲೆಯಲ್ಲಿ ಜನವರಿ 8ರಂದು ಇರಾನ್ ದಾಳಿ ನಡೆಸಿದ ನಂತರ ಆಘಾತಕಾರಿ ಮೆದುಳಿನ ಸಮಸ್ಯೆಗಳಿಗೆ ತುತ್ತಾಗಿರುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ ಎಂದು ಪೆಂಟಗನ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಸೇವಾ ಸದಸ್ಯರಲ್ಲಿ 76 ಮಂದಿ ಕರ್ತವ್ಯಕ್ಕೆ ಮರಳಿದ್ದರೆ, 26 ಮಂದಿ ಚಿಕಿತ್ಸೆಗಾಗಿ ತೆರಳಿದ್ದಾರೆ ಎಂದು ಇಲಾಖೆ ತಿಳಿಸಿದೆ. ಉಳಿದಂತೆ ಏಳು ಮಂದಿ ತಪಾಸಣೆಗಾಗಿ ಇರಾಕ್‌ನಿಂದ ಜರ್ಮನಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಮೆದುಳಿನ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡುವ ಮಾರ್ಗಗಳನ್ನು ಪೆಂಟಗನ್ ಅಧ್ಯಯನ ನಡೆಸುತ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا