Urdu   /   English   /   Nawayathi

ರೋಹಿಂಗ್ಯಾ ನಿರಾಶ್ರಿತರಿದ್ದ ದೋಣಿ ಮುಳುಗಿ 14 ಜನರ ಸಾವು: 70 ಮಂದಿ ರಕ್ಷಣೆ

share with us

ಕಾಕ್ಸ್ ಬಜಾರ್: 11 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಇಂದು ಮುಂಜಾನೆ ರೋಹಿಂಗ್ಯಾ ನಿರಾಶ್ರಿತರನ್ನು ಕರೆದೊಯ್ಯುವ ದೋಣಿ ಮುಳುಗಿ ಸುಮಾರು 14 ಜನ ಸಾವನ್ನಪ್ಪಿದ್ದಾರೆ. 12 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಗಾಳಕೊಲ್ಲಿಯನ್ನು ದಾಟಿ ಮಲೇಷ್ಯಾಕ್ಕೆ ಹೋಗುತ್ತಿದ್ದ ಮೀನುಗಾರಿಕೆ ಟ್ರಾಲರ್‌ನಲ್ಲಿ ಸುಮಾರು 130 ಜನರಿದ್ದರು ಎಂದು ಕೋಸ್ಟ್ ಗಾರ್ಡ್ ವಕ್ತಾರ ಹಮೀದುಲ್ಲಾ ಇಸ್ಲಾಂ ತಿಳಿಸಿದ್ದಾರೆ. ಈವರೆಗೆ ಎಪ್ಪತ್ತು ಜನರನ್ನು ರಕ್ಷಿಸಲಾಗಿದೆ. 2017 ರಲ್ಲಿ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದೌರ್ಜನ್ಯದಿಂದ ಪಲಾಯನ ಮಾಡಿದ 700,000 ಕ್ಕಿಂತ ಹೆಚ್ಚು ರೋಹಿಂಗ್ಯಾಗಳು, ಬಾಂಗ್ಲಾದೇಶದ ಕಾಕ್ಸ್ ಬಜಾರ್ ಜಿಲ್ಲೆಯ ಕಿಕ್ಕಿರಿದ ನಿರಾಶ್ರಿತರ ಶಿಬಿರಗಳಲ್ಲಿ ಬೀಡು ಬಿಟ್ಟಿದ್ದರು. ಈ ಪ್ರದೇಶದಿಂದ ಅವರೆಲ್ಲಾ ಮಲೇಷ್ಯಾಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಎರಡು ದೋಣಿಗಳ ಮೂಲಕ ಅವರೆಲ್ಲಾ ತೆರಳುತ್ತಿದ್ದರು. ಅದರಲ್ಲಿ ಒಂದು ದೋಣಿ ಮುಳುಗಿದೆ. ಆದ್ರೆ ಇನ್ನೊಂದು ಹಡಗು ಮತ್ತು ಅದರಲ್ಲಿ ಇದ್ದವರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ನಾವು ಕಾರ್ಯಾಚರಣೆಯನ್ನು ಮಾಡುತ್ತಿದ್ದೇವೆ. 14 ಶವಗಳು ಸಿಕ್ಕಿದ್ದು, 70 ಜನರನ್ನು ರಕ್ಷಿಸಿದ್ದೇವೆ ಎಂದು ಕೋಸ್ಟ್ ಗಾರ್ಡ್ ಕಮಾಂಡರ್ ನೈಮ್ ಉಲ್ ಹಕ್ ತಿಳಿಸಿದ್ದಾರೆ. ಸೇಂಟ್ ಮಾರ್ಟಿನ್ ದ್ವೀಪದ ಬಳಿ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ದೋಣಿಗಳು ಕಾರ್ಯಾಚರಣೆ ನಡೆಸುತ್ತಿವೆ. ಇವರೆಲ್ಲರು ಕಳ್ಳಸಾಗಣೆದಾರರಿಂದ ಆಮಿಷಕ್ಕೊಳಗಾಗಿ ಅಲ್ಲಿಗೆ ಹೋಗುತ್ತಿರಬಹುದು. ಉದ್ಯೋಗ ಮತ್ತು ಶಿಕ್ಷಣಕ್ಕೆ ಕಡಿಮೆ ಅವಕಾಶಗಳಿರುವ ಹಿನ್ನೆಲೆ ಸಾವಿರಾರು ಜನರು ಆಗ್ನೇಯ ಏಷ್ಯಾದ ಇತರ ದೇಶಗಳಿಗೆ ಹೋಗಲು ಕೂಡ ಪ್ರಯತ್ನಿಸುತ್ತಿದ್ದಾರೆ. ನವೆಂಬರ್-ಮಾರ್ಚ್ ಅವಧಿಯಲ್ಲಿ ಕಳ್ಳಸಾಗಣೆ ಹೆಚ್ಚಾಗುತ್ತದೆ. ಮ್ಯಾನ್ಮಾರ್‌ನ ರಾಖೈನ್ ರಾಜ್ಯ ಇತ್ತೀಚೆಗೆ ಸುಮಾರು 300,000 ರೋಹಿಂಗ್ಯಾ ನಿರಾಶ್ರಿತರನ್ನು ಸೇರಿಸಿಕೊಂಡಿದೆ. ಅಲ್ಲದೇ ರೋಹಿಂಗ್ಯಾಗಳು 2015 ರಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್​ ಬಿಟ್ಟು ಥಾಯ್ಲೆಂಡ್​​, ಮಲೇಷ್ಯಾ ಮತ್ತು ಇಂಡೋನೇಷ್ಯಾಕ್ಕೆ ಹೋಗಲು ಪ್ರಯತ್ನಿಸಿದ್ರು ಎಂದು ಗಡಿ ಕಾವಲು ಕಮಾಂಡರ್ ಫೈಸಲ್ ಹಸನ್ ಖಾನ್ ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا