Urdu   /   English   /   Nawayathi

ದೆಹಲಿ ಕಾಲೇಜಿಗೆ ಪುಂಡರ ದಾಳಿ: ಸಾಮೂಹಿಕ ಲೈಂಗಿಕ ಕಿರುಕುಳ, ವಿದ್ಯಾರ್ಥಿನಿಯರಿಂದ ಭಾರಿ ಪ್ರತಿಭಟನೆ

share with us

ನವದೆಹಲಿ: 10 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಕಾಮುಕರು ಅಟ್ಟಹಾಸ ಮೆರೆದಿದ್ದು, ಕಾಲೇಜು ಫೆಸ್ಟಿವಲ್ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಸಾಮೂಹಿಕ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ದೆಹಲಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ದೆಹಲಿಯ ಗಾರ್ಗಿ ಮಹಿಳಾ ಕಾಲೇಜಿಗೆ ಪುಂಡರ ಗುಂಪೊಂದು ನುಗ್ಗಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಗಾರ್ಗಿ ಕಾಲೇಜಿನಲ್ಲಿ ಕಾಲೇಜು ಉತ್ಸವ ನಡೆಯುತ್ತಿತ್ತು. ಉತ್ಸವಕ್ಕೆ ನೂರಾರು ವಿದ್ಯಾರ್ಥಿನಿಯರು ಆಗಮಿಸಿದ್ದರು. ಕಾಲೇಜಿನಲ್ಲಿ ಮೂರು ದಿನಗಳ ಉತ್ಸವ ಆಯೋಜಿಸಲಾಗಿತ್ತು. ಫೆಬ್ರವರಿ 6 ರಂದು ಈ ಘಟನೆ ನಡೆದಿದ್ದು, ಸಂಜೆ 6.30ರ ಸುಮಾರಿಗೆ ಕಾಲೇಜಿಗೆ ನುಗ್ಗಿದ ಕುಡುಕರ ಗುಂಪು, ವಿದ್ಯಾರ್ಥಿಗಳ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಈ ವೇಳೆ ಸಿಎಎ ಪರ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡು ಬಂದ ಪಾನಮತ್ತ ದುಷ್ಕರ್ಮಿಗಳ ಗುಂಪು, ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ, ವಿದ್ಯಾರ್ಥಿನಿಯರ ಮುಂದೆ ನಿಂತು ಹಸ್ತಮೈಥುನ ಮಾಡಿಕೊಂಡಿದ್ದಾರೆ ಎಂದು ಕೆಲವು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈ ಸಂಬಂಧ ಕಾಲೇಜಿನ ವಿದ್ಯಾರ್ಥಿನಿಯರು ವಿಡಿಯೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದು, ಕೆಲವು ಯುವತಿಯರನ್ನು ವಾಶ್​ರೂಮ್​ನಲ್ಲಿ ಕೂಡಿಹಾಕಲಾಗಿತ್ತು, ಉತ್ಸವ ನಡೆಯುತ್ತಿರುವಾಗ ಟೀಸ್​​ ಮಾಡಿದ್ದಲ್ಲದೇ, ಯುವತಿಯರ ಎದುರಿಗೆ ಹಸ್ತಮೈಥುನ ಮಾಡಿಕೊಂಡರು. ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರು. ಅವರು ವಿದ್ಯಾರ್ಥಿಗಳಲ್ಲ, 30 ರಿಂದ 35 ವರ್ಷ ವಯಸ್ಸಿನವರು ಎಂದು ಯುವತಿಯರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಘಟನೆ ಖಂಡಿಸಿ ಕಾಲೇಜಿನಲ್ಲಿ ಮುಷ್ಕರ ನಡೆಸಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಇನ್ನು ಘಟನೆ ನಡೆದು ನಾಲ್ಕು ದಿನಗಳಾದ್ರೂ ಇದುವರೆಗೂ ಯಾವುದೇ ಕಂಪ್ಲೇಂಟ್ ದಾಖಲಾಗಿಲ್ಲ. ವಿದ್ಯಾರ್ಥಿನಿಯರಾಗಲೀ, ಕಾಲೇಜು ಆಡಳಿತ ಮಂಡಳಿಯಾಗಲೀ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಇಂದು ಕಾಲೇಜಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿ ಕೂಲಂಕಷವಾಗಿ ಮಾಹಿತಿ ಸಂಗ್ರಹಿಸುತ್ತಿದೆ.

ವಿದ್ಯಾರ್ಥಿನಿಯರಿಂದ ಭಾರಿ ಪ್ರತಿಭಟನೆ

ಇನ್ನು ಲೈಂಗಿಕ ಕಿರುಕುಳ ಮತ್ತು ಕಾಲೇಜಿಗೆ ದುಷ್ಕರ್ಮಿಗಳ ಅಕ್ರಮ ಪ್ರವೇಶಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲೇ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸುತ್ತಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಕಾಲೇಜು ಆಡಳಿತ ಮಂಡಳಿ ಮತ್ತು ದೆಹಲಿ ಪೊಲೀಸರಿಗೆ ಒತ್ತಾಯಿಸಿದ್ದಾರೆ.

‏‎‏‎ابھے چاولہ@abhaychawla13

Identify these guys who broke open the gate to come inside n molest students.

131

12:21 PM - Feb 9, 2020

Twitter Ads info and privacy

104 people are talking about this

Mythreyee@MythreyeeRamesh

Several other students and alumni of told @TheQuint that there was serious lapse of security, multiple women were harassed, drunk men who did not have passes were allowed to enter fest.

Embedded video

45

1:34 PM - Feb 8, 2020

Twitter Ads info and privacy

34 people are talking about this

Afreen Zehra@AfreenZehra13

Student Narrative about 6th Feb Mass Molestation.

View image on TwitterView image on Twitter View image on Twitter

32

9:12 PM - Feb 9, 2020

Twitter Ads info and privacy

25 people are talking about this

‏‎‏‎ابھے چاولہ@abhaychawla13

Unknown males enter to molest students. Video by a student.

Embedded video

17

12:18 PM - Feb 9, 2020

Twitter Ads info and privacy

See ‏‎‏‎ابھے چاولہ's other Tweets

ANI@ANI

Delhi: A team of National Commission for Women (NCW) arrives at Gargi College. Students of Gargi College have alleged sexual assault by outsiders. https://twitter.com/ANI/status/1226736063122571265 …

View image on TwitterView image on TwitterView image on Twitter

ANI@ANI

Delhi: National Commission for Women (NCW) has taken cognizance of alleged sexual assault on students of Delhi University's Gargi College for women. A team of NCW will visit the college today.

View image on Twitter View image on Twitter

View image on Twitter

105

10:58 AM - Feb 10, 2020

Twitter Ads info and privacy

42 people are talking about this

ANI@ANI

Delhi: National Commission for Women (NCW) has taken cognizance of alleged sexual assault on students of Delhi University's Gargi College for women. A team of NCW will visit the college today.

View image on TwitterView image on TwitterView image on Twitter

210

10:44 AM - Feb 10, 2020

Twitter Ads info and privacy

60 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا