Urdu   /   English   /   Nawayathi

ಎನ್‌ಆರ್‌ಸಿಯಿಂದ 14 ಲಕ್ಷ ಹಿಂದೂಗಳಿಗೆ ತೊಂದರೆ : ಉದ್ಧವ್ ಠಾಕ್ರೆ

share with us

ಮುಂಬೈ: 05 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಎನ್‍ಆರ್‍ಸಿ ದೇಶದ ಎಲ್ಲಾ ಧರ್ಮಗಳ ಮೇಲೂ ಪರಿಣಾಮ ಬೀರಲಿದ್ದು, ಅದನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಬಾಂಗ್ಲಾ ದೇಶ ಮತ್ತು ಪಾಕಿಸ್ತಾನದ ನಿರಾಶ್ರಿತರಿಗೆ ಭಾರತದ ಪೌರತ್ವ ಕೊಡಬೇಕು ಎಂಬುದು ಶಿವಸೇನೆಯ ಹಳೆಯ ಬೇಡಿಕೆ. ಆದರೆ ಈಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಮಸೂದೆ ನೆರೆಯ ದೇಶಗಳಲ್ಲಿ ಸಂಕಷ್ಟಕ್ಕೀಡಾದವರಿಗೆ ಪೌರತ್ವ ನೀಡುವುದಕ್ಕಿಂತ ಹೆಚ್ಚಾಗಿ ಅದರ ಬೆನ್ನ ಹಿಂದೆ ಜಾರಿಯಾಗುವ ಎನ್‌ಆರ್‌ಸಿ ಹಿಂದೂಗಳ ಮೇಲೂ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮೊದಲು ನೆರೆಯ ದೇಶಗಳಿಂದ ಬಂದಿರುವ ಅಲ್ಪಸಂಖ್ಯಾತರ ಸಂಖ್ಯೆಯನ್ನು ಗುರುತಿಸಬೇಕು. ನಂತರ ಅವರ ವಲಸೆಗೆ ನಿಜವಾದ ಕಾರಣಗಳನ್ನು ಪತ್ತೆಹಚ್ಚಬೇಕು ಎಂದಿದ್ದಾರೆ. ಅಲ್ಲಿಂದ ಬಂದ ನಿರಾಶ್ರಿತರು ಭಾರತದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲಿದ್ದಾರೆಯೇ, ಅವರ ಉದ್ಯೋಗದ ಕಥೆ ಏನು? ಅವರ ಮಕ್ಕಳ ಶಿಕ್ಷಣದ ಸ್ಥಿತಿಗತಿಗಳೇನು ಇವೆಲ್ಲ ವಿಷಯಗಳನ್ನು ತಿಳಿದುಕೊಳ್ಳುವ ಹಕ್ಕು ನಮಗಿದೆ ಎಂದು ಅವರು ಸಾಮ್ನಾ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ನೆರೆಯ ದೇಶಗಳಿಂದ ಬಂದ ನಿರಾಶ್ರಿತರು ನಮ್ಮ ರಾಜ್ಯದಲ್ಲಿ ನೆಲೆಸಲು ಸಾಧ್ಯ ಎಂಬ ಚಿಂತೆ ಕಾಡುತ್ತಿದೆ. ನಮ್ಮ ಜನಗಳಿಗೆ ಸರಿಯಾದ ಮನೆ ಇಲ್ಲ. ನಮ್ಮವರು ದೆಹಲಿ, ಬೆಂಗಳೂರು ಅಥವಾ ಕೇಂದ್ರ ಸರ್ಕಾರ 370 ತೆಗೆದ ನಂತರ ಬದಲಾವಣೆಯಾಗಿರುವ ಕಾಶ್ಮೀರಕ್ಕೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಕಾಶ್ಮೀರಿ ಪಂಡಿತರ ಕುಟುಂಬಗಳು ಅವರದೇ ತಾಯ್ನಾಡಿನಲ್ಲಿ ನಿರಾಶ್ರಿತರಂತೆ ಬದುಕುತ್ತಿದ್ದಾರೆ. ಅವರ ಬಗ್ಗೆ ಕಾಳಜಿ ವಹಿಸಿಲ್ಲ. ನೆರೆಯ ದೇಶಗಳಲ್ಲಿರುವ ಸಂತ್ರಸ್ತರ ಹೆಸರಿನಲ್ಲಿ ಸಿಎಎ ರೂಪಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎನ್‍ಆರ್‍ಸಿಯನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ. ಎನ್‍ಆರ್‍ಸಿಯಿಂದ ಮುಸ್ಲಿಂ ಹಾಗೂ ಹಿಂದೂ ಇಬ್ಬರಿಗೂ ತೊಂದರೆಯಾಗುತ್ತದೆ. 19 ಲಕ್ಷ ಜನ ತಮ್ಮ ಪೌರತ್ವ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಅದರಲ್ಲಿ 14 ಲಕ್ಷ ಹಿಂದೂಗಳಾಗಿದ್ದರು ಎಂದರು. ಫೆ.9 ರಂದು ಎನ್‍ಆರ್‍ಸಿ ಮತ್ತು ಸಿಎಎ ಪರವಾಗಿ ಎಂಎನ್‍ಎಸ್ ಮುಖ್ಯಸ್ಥ ರಾಜ್ ಠಾಕ್ರೆ ನೇತೃತ್ವದಲ್ಲಿ ರ್ಯಾಲಿ ನಡೆಸುವುದನ್ನು ಆಕ್ಷೇಪಿಸಿದ ಮುಖ್ಯಮಂತ್ರಿಯವರು, ಎನ್‍ಆರ್‍ಸಿಯಿಂದ ಯಾರು ತೊಂದರೆಗೊಳಾಗುತ್ತಾರೋ ಅವರೇ ಅದರ ಪರವಾಗಿ ಪ್ರತಿಭಟನೆ ನಡೆಸುತ್ತಿರುವುದು ವಿಷಾದನೀಯ ಎಂದರು. ಮಹಾರಾಷ್ಟ್ರದಲ್ಲಿ ಕಾನೂನು ಜಾರಿಯಾದರ ಸಾಕಷ್ಟು ತೊಂದರೆಯಾಗಲಿದೆ. ರಾಜ್ಯದಲ್ಲಿ ಯಾರಿಗೂ ನಾನು ತೊಂದರೆಯಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ ಪಾಕಿಸ್ತಾನ ಮೂಲದ ಅದಾನ್ ಸಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ. ವಲಸಿಗರು ವಲಸಿರಾಗಿಯೇ ಇರಬೇಕು. ಅವರಿಗೆ ಪದ್ಮಶ್ರೇಣಿಯ ಪ್ರಶಸ್ತಿ ನೀಡಿ ಗೌರವಿಸುವುದು ಯಾವ ಮಾನದಂಡ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا