Urdu   /   English   /   Nawayathi

ಇತಿಹಾಸದಲ್ಲೇ ಅತಿ ದೀರ್ಘವಾಗಿ ಮಂಡಿಸಿದ 'ಖಾಲಿ' ಬಜೆಟ್​: ರಾಗಾ ವ್ಯಂಗ್ಯ

share with us

ನವದೆಹಲಿ: 01 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಇತಿಹಾಸದಲ್ಲೇ ಇದೊಂದು ದೀರ್ಘವಾದ ಬಜೆಟ್​ ಭಾಷಣವಾಗಿದೆ. ಆದರೆ ಇದರಲ್ಲಿ ಏನೂ ಇಲ್ಲ, ಎಲ್ಲಾ ಖಾಲಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ವ್ಯಂಗ್ಯವಾಡಿದ್ದಾರೆ.

ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್​ ಕುರಿತು ಪ್ರತಿಕ್ರಿಯಿಸಿರುವ ಅವರು, ನಮ್ಮ ದೇಶ ಮುಖ್ಯವಾಗಿ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ಯುವಕರಿಗೆ ಉದ್ಯೋಗ ಸೃಷ್ಟಿಸುವ ಯಾವೊಂದು ಕಾರ್ಯತಂತ್ರದ ಯೋಜನೆ ಈ ಬಜೆಟ್​ನಲ್ಲಿ ಕಾಣಸಿಗುವುದಿಲ್ಲ. ಇಲ್ಲಿ ತಂತ್ರಗಾರಿಕೆ ಇದೆಯೇ ಹೊರತು, ಪ್ರಧಾನ ಉದ್ದೇಶವಿಲ್ಲ. ಈ ಬಜೆಟ್​ ಕೇಂದ್ರ ಸರ್ಕಾರ, ಅದರ ಮನಸ್ಥಿತಿ, ಪುನರಾವರ್ತನೆಗಳನ್ನ ಬಹಳ ಚೆನ್ನಾಗಿ ವಿವರಿಸುತ್ತದೆ ಎಂದಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا