Urdu   /   English   /   Nawayathi

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗೋಲ್​ಮಾಲ್​ ಶಂಕೆ: ಎಸಿಬಿಗೆ ದೂರು ನೀಡಿದ ವಕೀಲ ನಟರಾಜ್ ಶರ್ಮಾ

share with us

ಬೆಂಗಳೂರು: 30 ಜನುವರಿ 2020 (ಫಿಕ್ರೋಖಬರ್ ಸುದ್ದಿ) ವೈದ್ಯಕೀಯ ಶಿಕ್ಷಣ ಇಲಾಖೆಯ ಸೀಟು ಹಂಚಿಕೆಯಲ್ಲಿ, 1,100 ಕೋಟಿಗೂ ಅಧಿಕ ಹಗರಣ ಆಗಿದೆ ಎಂದು ಹೇಳಲಾಗ್ತಿದೆ. ಈ ಕುರಿತು ದಾಖಲೆ ಸಮೇತ ಹೈಕೋರ್ಟ್ ವಕೀಲ ನಟರಾಜ್ ಶರ್ಮ, ಎಸಿಬಿಗೆ ದೂರು ನೀಡಿದ್ದಾರೆ‌. ದೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸೀಟು ಹಂಚಿಕೆಯಲ್ಲಿ, ಕೋಟ್ಯಂತರ ರೂ. ಲೂಟಿ ಹೊಡೆದಿವೆ. ಇದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದ್ದಾರೆ. ಎಂಬಿಬಿಎಸ್(MBBS)​ ಮಾತ್ರವಲ್ಲದೇ ಎಂಡಿ(MD) ಹಾಗೂ ಎಂಎಸ್​(MS)ನಲ್ಲಿಯೂ ಅಕ್ರಮ‌ ನಡೆದಿದ್ದು, ವಿದ್ಯಾರ್ಥಿಗಳು ಎಷ್ಟೇ ರ್‍ಯಾಂಕ್ ತೆಗೆದರೂ ಪ್ರಯೋಜನವಿಲ್ಲ. ಹಾಗೂ ಬಡ ಮಕ್ಕಳ ಪಾಡು ಕೇಳುವವರಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಮೀಲಾಗಿ, ಕೋಟಿ ಕೋಟಿ ಅವ್ಯವಹಾರ ಮಾಡಿವೆ ಎಂದು ದೂರಿದ್ದಾರೆ.

Medical Education Department

ಎಸಿಬಿಗೆ ದೂರು ನೀಡಿದ ವಕೀಲ ನಟರಾಜ್ ಶರ್ಮಾ

ಇದರಲ್ಲಿ‌ ಮಾನ್ಯ ಡೈರೆಕ್ಟರ್ ಆಫ್ ಮೆಡಿಕಲ್ ಎಜುಕೇಷನ್, ಆರ್​ಗಿಯುಹೆಚ್​ಎಸ್​ (RGUHS) ಸಿಬ್ಬಂದಿ, ವೈದ್ಯಕೀಯ ಶಿಕ್ಷಣಾಧಿಕಾರಿಗಳು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಕೈವಾಡದ ಶಂಕೆಯಿದೆ ಎಂದು ಎಸಿಬಿಗೆ ನೀಡಿದ ದೂರಿನಲ್ಲಿ ವಕೀಲ ನಟರಾಜ್ ಶರ್ಮ ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا