Urdu   /   English   /   Nawayathi

ಕೇರಳ ವಿಧಾನಸಭೆಯಲ್ಲಿ ಇಂದು ಹೈಡ್ರಾಮಾ: ವಿರೋಧ ಪಕ್ಷ ಶಾಸಕರಿಂದ ರಾಜ್ಯಪಾಲರಿಗೆ 'ಗೋ ಬ್ಯಾಕ್' ಘೋಷಣೆ

share with us

ತಿರುವನಂತಪುರ: 29 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಬುಧವಾರ ಬೆಳಗ್ಗೆ ಕೇರಳ ವಿಧಾನಸಭೆಯಲ್ಲಿ ನಾಟಕೀಯ ವಿದ್ಯಮಾನ ನಡೆಯಿತು. ಇಂದು ಬೆಳಗ್ಗೆ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಸಾಂಪ್ರದಾಯಿಕವಾಗಿ ಸರ್ಕಾರದ ಯೋಜನೆಗಳ ಕುರಿತು ಭಾಷಣ ಮಾಡಲು ಆಗಮಿಸಿದರು. ಸದನದ ಬಾವಿಗೆ ಬರುತ್ತಿದ್ದಂತೆ ವಿರೋಧ ಪಕ್ಷ ಯುಡಿಎಫ್ ಶಾಸಕರು ಅವರನ್ನು ಸುತ್ತುವರಿದು ಗೋ ಬ್ಯಾಕ್ ಗವರ್ನರ್, ಗೋ ಬ್ಯಾಕ್ ಗವರ್ನರ್ ಎಂದು ಘೋಷಣೆಗಳನ್ನು ಕೂಗಿದರು. ಗವರ್ನರ್ ಅವರನ್ನು ಸದನಕ್ಕೆ ಸಾಂಪ್ರದಾಯಿಕವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಕರೆದುಕೊಂಡು ಬಂದಿದ್ದರು. ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಯಿಂದಾಗಿ ಸದನದ ಬಾವಿಯೊಳಗೆ ರಾಜ್ಯಪಾಲರು ಸುಮಾರು 10 ನಿಮಿಷಗಳ ಕಾಲ ನಿಂತು ನಂತರ ಸದನದ ಭದ್ರತೆಗಾರರ ರಕ್ಷಣೆಯೊಂದಿಗೆ ಭಾಷಣ ಮಾಡಲು ಸ್ಪೀಕರ್ ವೇದಿಕೆಯತ್ತ ತೆರಳಿದರು.

ANI@ANI

Thiruvananthapuram: United Democratic Front (UDF) MLAs block Kerala Governor Arif Mohammad Khan as he arrives in the assembly for the budget session. CM Pinarayi Vijayan also accompanying the Governor.

Embedded video

636

9:05 AM - Jan 29, 2020

Twitter Ads info and privacy

428 people are talking about this


ಕೇರಳ ವಿಧಾನಸಭೆಯಲ್ಲಿ ಈ ರೀತಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡುತ್ತಿರುವುದು ಇದೇ ಮೊದಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಕೇರಳ ವಿಧಾನಸಭೆಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ರಾಷ್ಟ್ರಪತಿಗಳನ್ನು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಇತ್ತೀಚೆಗೆ ಸದನದಲ್ಲಿ ನಿರ್ಣಯ ಹೊರಡಿಸಿದ್ದರು.

ANI@ANI

Thiruvananthapuram: State assembly marshals escort Kerala Governor Arif Mohammad Khan to his chair as United Democratic Front (UDF) MLAs continue to raise slogans of "recall Governor".

View image on TwitterView image on TwitterView image on TwitterView image on Twitter

535

9:11 AM - Jan 29, 2020

Twitter Ads info and privacy

160 people are talking about this

ಕೇರಳ ರಾಜ್ಯದಲ್ಲಿ ವಿರೋಧ ಪಕ್ಷ ಯುಡಿಎಫ್ ಕೂಡ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವುದು ವಿಶೇಷ.  

 ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا