Urdu   /   English   /   Nawayathi

ಹೊನ್ನಾವರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ರ್ಯಾಲಿ : ಹಾಗೂ ಮನವಿ ಸಲ್ಲಿಕೆ

share with us

ಹೊನ್ನಾವರ: 28 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಸರಕಾರವೇ ಕಾಳಜಿ ವಹಿಸಿ ಅತೀ ಶೀಘ್ರದಲ್ಲಿ ಶರಾವತಿ ಅಳವಿಗೆ ಅಲೆತಡೆಗೋಡೆ ನಿರ್ಮಿಸಬೇಕು ಹಾಗೂ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೀಡಿದ ಗುತ್ತಿಗೆಯನ್ನು ರದ್ದುಗೊಳಿಸಿ ಅವರ ಕಾರ್ಯಚಟುವಟಿಕೆಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಹೊನ್ನಾವರದಲ್ಲಿ ಇಂದು ಬೃಹತ್ ಪ್ರತಿಭಟನೆಯ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ವಿವಿಧ ಮೀನುಗಾರಿಕಾ ಸಂಘಟನೆಗಳ, ಊರ ನಾಗರಿಕರ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಯಿತು. ಹೊನ್ನಾವರ ಪೋರ್ಟ್ ಕಂಪನಿ ಎಂಬ ಹೆಸರಿನಲ್ಲಿ ಆಂಧ್ರದ ಗುತ್ತಿಗೆದಾರರೊಬ್ಬರು ಶರಾವತಿ ಸಂಗಮದ ಅಳವೆ ಸಹಿತ 100 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಬಂದರು ನಿರ್ಮಾಣ ಕಾಮಗಾರಿ ಈ ಹಿಂದೆಯೆ ಆರಂಭಿಸಿದ್ದರು ಹಿಂದಿನ ಬಿಜೆಪಿ ಸರ್ಕಾರದ ಸಚಿವರಾದ ಕೃಷ್ಣ ಪಾಲೇಮರ್ ಅಂದು ಬಂದರಿಗೆ ಅನುಮತಿ ನೀಡಿದ್ದರು. ಮೀನುಗಾರರಿಗೆ, ಮೀನುಗಾರಿಕೆಗೆ ತೊಂದರೆ ಇಲ್ಲದಂತೆ ಅವರಿಗೆ ಉದ್ಯೋಗ ಕೊಟ್ಟು, ಬಂದರು ಮಾಡುವುದಾಗಿ ಭರವಸೆ ಕೊಟ್ಟ ಕಂಪನಿ ತನ್ನ ಭರವಸೆ ಈಡೇರಿಸಿಲ್ಲ. ಅಲ್ಲದೇ ಮೀನುಗಾರಿಕೆಗೆ ತೀವ್ರ ತೊಂದರೆ ಉಂಟಾಗಿದೆ ಎನ್ನುವುದು ಪ್ರತಿಭಟನಾ ನಿರತರ ಅಳಲಾಗಿದೆ. ​​​​​ಮಹಿಳೆಯರು, ಪುರುಷರು, ಹಿಂದೂ ಮುಸ್ಲಿಂ ಕ್ರಿಸ್ತರೆನ್ನದೆ ಎಲ್ಲರೂ ಒಗ್ಗೂಡಿ ಮೀನುಗಾರಿಕೆಗೆ ರಜೆ ನೀಡಿ ಬೃಹತ್ ಪ್ರತಿಭಟನೆ ನಡೆಸಿದರು.

ಸ, ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا