Urdu   /   English   /   Nawayathi

ಅಫ್ಘಾನಿಸ್ತಾನದಲ್ಲಿ ಪ್ರಯಾಣಿಕರ ವಿಮಾನ ಪತನ... ಸಾವು ನೋವಿನ ಸಂಖ್ಯೆ ನಿಗೂಢ

share with us

ಘಜ್ನಿ(ಅಫ್ಘಾನಿಸ್ತಾನ): 28 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಪ್ರಯಾಣಿಕರ ವಿಮಾನವೊಂದು ಅಪಘಾತಕ್ಕೀಡಾಗಿರುವ ಘಟನೆ ಪೂರ್ವ ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದಲ್ಲಿ ನಡೆದಿದೆ. ಆದರೆ, ವಿಮಾನದಲ್ಲಿ ಎಷ್ಟು ಜನರಿದ್ದರು ಎಂದು ತಿಳಿದು ಬಂದಿಲ್ಲ. "ಘಜ್ನಿ ಪ್ರಾಂತ್ಯದ ದೇಹ್ ಯಾಕ್ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ 1:10ರ ಸುಮಾರಿಗೆ ವಿಮಾನ ಅಪಘಾತಕ್ಕೀಡಾಗಿದೆ. ಇದು ಮಿಲಿಟರಿ ಅಥವಾ ಪ್ರಯಾಣಿಕರ ವಿಮಾನ ಎಂಬುದು ಸಹ ಇನ್ನೂ ತಿಳಿದಿಲ್ಲ ಎಂದು ರಾಜ್ಯಪಾಲರ ವಕ್ತಾರ ಆರೀಫ್​ ನೂರಿ ಎಎಫ್‌ಪಿಗೆ ತಿಳಿಸಿದ್ದಾರೆ. ಪ್ರಾಂತ್ಯದ ಪೊಲೀಸರು ಸಹ ಅಪಘಾತವಾದ ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಕಾರಣ ತಾಲಿಬಾನ್ ಉಗ್ರರ ಪ್ರಭಾವದಿಂದ ಈ ಪ್ರದೇಶವನ್ನು ಪ್ರವೇಶಿಸುವುದು ಕಷ್ಟಕರವಾಗಿದೆ. ವಿಮಾನವು ಸರ್ಕಾರಿ ಸ್ವಾಮ್ಯದ ಅರಿಯಾನಾ ಅಫ್ಘಾನ್​ ಏರ್‌ಲೈನ್ಸ್‌ಗೆ ಸೇರಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. "ಅರಿಯಾನಾ ಅಫ್ಘಾನ ಏರ್​ಲೈನ್ಸ್​​ನ ಎಲ್ಲ ವಿಮಾನಗಳು ಸುರಕ್ಷಿತವಾಗಿವೆ ಎಂದು ಸಂಸ್ಥೆ ತನ್ನ ಫೇಸ್​ಬುಕ್ ಪುಟದಲ್ಲಿ ತಿಳಿಸಿದೆ. ಮಿಲಿಟರಿ ವಿಮಾನಗಳು, ವಿಶೇಷವಾಗಿ ಹೆಲಿಕಾಪ್ಟರ್‌ಗಳ ಅಪಘಾತಗಳು ಅಫ್ಘಾನಿಸ್ತಾನದಲ್ಲಿ ಸಾಮಾನ್ಯವಾಗಿವೆ. ಇದು ಯುದ್ಧ ಪ್ರದೇಶವಾಗಿರುವುದರಿಂದ ಅಲ್ಲಿ ಧಂಗೆಕೋರರು ಹೆಲಿಕಾಪ್ಟರ್‌ಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರಾಂತ್ಯದ ಕುಂಡುಜ್‌ನಿಂದ ಕಾಬೂಲ್‌ಗೆ ನಿಗದಿತ ಹಾರಾಟದ ಸಮಯದಲ್ಲಿ ಪಮೀರ್ ಏರ್‌ವೇಸ್ ವಿಮಾನವು ಕೆಟ್ಟ ಹವಾಮಾನದಿಂದ ಮೇ 2010 ರಲ್ಲಿ ಅಪಘಾತಕ್ಕೀಡಾಗಿತ್ತು. ಇದು ಕಾಬೂಲ್‌ನಿಂದ 20 ಕಿಲೋಮೀಟರ್ ದೂರದಲ್ಲಿರುವ ಪರ್ವತಶ್ರೇಣಿಗೆ ಅಪ್ಪಳಿಸಿದಾಗ ಆರು ಸಿಬ್ಬಂದಿ ಸೇರಿದಂತೆ 38 ಪ್ರಯಾಣಿಕರು ಸಾವನ್ನಪ್ಪಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا