Urdu   /   English   /   Nawayathi

ರೇಣುಕಾಚಾರ್ಯರನ್ನು ತಕ್ಷಣ ವಜಾಗೊಳಿಸಲಿ: ಎ.ಸಿ.ವಿನಯ್ ರಾಜ್ ಒತ್ತಾಯ

share with us

ಮಂಗಳೂರು: 25 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಮುಸ್ಲಿಮರ ಪ್ರಾರ್ಥನಾ ಕೇಂದ್ರ ಮಸೀದಿಗಳು ಬಾಂಬ್ ಹಾಗೂ ಶಸ್ತ್ರಾಸ್ತ್ರಗಳನ್ನು ಶೇಖರಿಸಲಾಗುತ್ತಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಮಸೀದಿಯನ್ನು ಉಪಯೋಗಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ‌ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ರೇಣುಕಾಚಾರ್ಯ ಅವರನ್ನು ತಮ್ಮ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ತಕ್ಷಣ ವಜಾಗೊಳಿಸಬೇಕೆಂದು ಎ.ಸಿ.ವಿನಯರಾಜ್ ಆಗ್ರಹಿಸಿದರು. ಸಿಎಂ ತಮ್ಮ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ರೇಣುಕಾಚಾರ್ಯರನ್ನು ತಕ್ಷಣ ವಜಾಗೊಳಿಸಲಿ: ಎ.ಸಿ.ವಿನಯ್ ರಾಜ್ ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಒಂದು ಧರ್ಮವನ್ನು ಕೇಂದ್ರೀಕರಿಸಿ ಭಯವನ್ನು ಸೃಷ್ಟಿಮಾಡುವ ವಾತಾವರಣ ದೇಶದಲ್ಲಿ ನಡೆಯುತ್ತಿದೆ ಎಂದು ಹೇಳಿದರು. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಗೋಲಿಬಾರ್ ಘಟನೆಯ ಸಂದರ್ಭ ನೆರೆಯ ಗಡಿಭಾಗದಿಂದ ಬಂದಿರುವ ಅಲ್ಪಸಂಖ್ಯಾತ ಮುಸ್ಲಿಮರನ್ನು ಕೇಂದ್ರೀಕರಿಸಿ ಮೊಬೈಲ್ ಟವರ್​ನಲ್ಲಿ‌ ದಾಖಲಾಗಿರುವ ಮೊಬೈಲ್ ಸಂಖ್ಯೆಯ ಆಧಾರವನ್ನು ಇರಿಸಿಕೊಂಡು ಸಿಆರ್​ಪಿಸಿ 41(A) ಪ್ರಕಾರ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಈ ಮೂಲಕ ಸಮನ್ಸ್ ಜಾರಿಯಾದವರು ಕೃತ್ಯದಲ್ಲಿ ಭಾಗಿಯಾಗಿದ್ದು, ಆ ಬಗ್ಗೆ ಪೂರಕ ದಾಖಲೆ ದೊರಕಿದೆ. ಆದ್ದರಿಂದ ತನಿಖೆಗೆ ಹಾಜರಾಗಬೇಕು ಎಂದು ಹೇಳಲಾಗುತ್ತಿದೆ. ಇದು ಕಾನೂನು ಬಾಹಿರ ಪ್ರಕ್ರಿಯೆ. ಗೋಲಿಬಾರ್ ನಡೆದ ದಿನ ಅವರು ಯಾವುದೇ ಕಾರಣಕ್ಕಾಗಿ ಮಂಗಳೂರಿಗೆ ಅವರು ಬಂದಿರಬಹುದು. ಆದರೆ, ಒಂದು ಧರ್ಮಕ್ಕೆ ಸೀಮಿತವಾಗಿ ನೋಟಿಸ್ ಜಾರಿಯಾಗಿದೆ. ಅದರಲ್ಲಿ ಎಷ್ಟೋ ಮಂದಿ ತನಿಖೆಗೆ ಸಹಕರಿಸಿದ್ದಾರೆ. ಆ ಬಳಿಕ ಅವರನ್ನು ಬಿಟ್ಟುಬಿಡಲಾಗಿದೆ. ಅಂದರೆ ಆರೋಪಕ್ಕೆ ಪೂರಕ ದಾಖಲೆಗಳಿಲ್ಲ. ಈ ಮೂಲಕ ಪೊಲೀಸ್ ಇಲಾಖೆಯು ಮುಸ್ಲಿಂ ಧರ್ಮದ ಜನರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸುವ ಕಾರ್ಯ ನಡೆಸುತ್ತಿದೆ. ಇದು ಖಂಡನೀಯ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸರಿಯಾದ ಪುರಾವೆಗಳಿದ್ದಲ್ಲಿ ಮಾತ್ರ ನೋಟಿಸ್ ಕಳುಹಿಸಬೇಕು. ಇಲ್ಲದಿದ್ದಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದು ಎ.ಸಿ.ವಿನಯರಾಜ್ ಹೇಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا