Urdu   /   English   /   Nawayathi

ಕೋರ್ಟ್​ ಆವರಣದಲ್ಲೇ ಪರ್ತಕರ್ತರ ಮೇಲೆ ಹಲ್ಲೆ ನಡೆಸಿದ ಅತ್ಯಾಚಾರ ಅಪರಾಧಿಗಳು!ವಿಡಿಯೋ

share with us

ನವದೆಹಲಿ: 18 ಜನುವರಿ 2020 (ಫಿಕ್ರೋಖಬರ್ ಸುದ್ದಿ) 2013ರಲ್ಲಿ ಗಾಂಧಿನಗರದಲ್ಲಿ ನಡೆದ ಐದು ವರ್ಷದ ಅಪ್ರಾಪ್ತೆಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದ ಅಪರಾಧಿಗಳಿಬ್ಬರು ಇಂದು ಕೋರ್ಟ್​ ಆವರಣದಲ್ಲೇ ಪರ್ತಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ದೆಹಲಿಯ ಕರ್ಕಾರ್ಡೂಮ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ತೀರ್ಪು ನೀಡಿದೆ. ವಿಚಾರಣೆ ಬಳಿಕ ಕೋರ್ಟ್​ನಿಂದ ಅಪರಾಧಿಗಳು ಹೊರಬರುತ್ತಿರುವುದನ್ನು ಮೊಬೈಲ್​ನಲ್ಲಿ ಸೆರೆಹಿಡಿಯುತ್ತಿದ್ದ ಪರ್ತಕರ್ತರ ಮೇಲೆ ಮನೋಜ್​ ಕುಮಾರ್​ ಹಾಗೂ ಪ್ರದೀಪ್​​ ಹಲ್ಲೆ ನಡೆಸಿದ್ದು, ಮೊಬೈಲ್​ಗಳನ್ನ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಜನವರಿ 30 ರಂದು ಅಪರಾಧಿಗಳ ಶಿಕ್ಷೆ ಸಂಬಂಧ ಕೋರ್ಟ್ ವಿಚಾರಣೆ ನಡೆಸಲಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا