Urdu   /   English   /   Nawayathi

ಬಿಹಾರ ವಿಧಾನಸಭೆ ಚುನಾವಣೆ: ಬಿಜೆಪಿ ಘೋಷಿಸಿದ ಸಿಎಂ ಅಭ್ಯರ್ಥಿ ಯಾರು ಗೊತ್ತೇ?

share with us

ಪಾಟ್ನಾ(ಬಿಹಾರ): 16 ಜನುವರಿ 2020 (ಫಿಕ್ರೋಖಬರ್ ಸುದ್ದಿ) 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮುಂಚಿತವಾಗಿಯೇ ಘೋಷಣೆ ಮಾಡಿದೆ. ಇವತ್ತು ಪಾಟ್ನಾದಲ್ಲಿ ನಡೆದ ಪೌರತ್ವ(ತಿದ್ದುಪಡಿ) ಕಾಯ್ದೆ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ, ನಿತೇಶ್ ಕುಮಾರ್ ಮುಂದಿನ ಸಿಎಂ ಅಭ್ಯರ್ಥಿ ಎಂದು ಪ್ರಕಟಿಸಿಯೇ ಬಿಟ್ಟರು. 2017ರಲ್ಲಿ ಆರ್​ಜೆಡಿ ಜೊತೆಗಿನ ಸಂಬಂಧ ಮುರಿದುಕೊಂಡ ನಿತೀಶ್​​​ ಕುಮಾರ್​ ನೇತೃತ್ವದ ಜೆಡಿಯು, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಇದೀಗ ರಾಜ್ಯ ಮತ್ತೊಂದು ಚುನಾವಣೆ ಎದುರಿಸಲು ರೆಡಿಯಾಗುತ್ತಿದ್ದು ಉಭಯ ಪಕ್ಷಗಳು ಒಟ್ಟಿಗೆ ಕಣಕ್ಕಿಳಿಯಲು ಸಿದ್ಧವಾಗಿವೆ. ಈ ಮೂಲಕ ಲಾಲೂ ಪ್ರಸಾದ್​ ಯಾದವ್​ ಅವರ ಆರ್​​ಜೆಡಿ ಹಾಗೂ ಕಾಂಗ್ರೆಸ್​ ಪಕ್ಷಕ್ಕೆ ಟಾಂಗ್​ ನೀಡಿವೆ. ಇದೇ ವೇಳೆ ಮಮತಾ ಬ್ಯಾನರ್ಜಿ, ಲಾಲೂ ಪ್ರಸಾದ್​ ಯಾದವ್​ ಹಾಗೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್​ ಶಾ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ನಿಜವಾದ ಕಾರಣ ಏನು? ವೋಟ್​ ಬ್ಯಾಂಕ್‌ಗಾಗಿ ಈ ರೀತಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಎಂದು ಕೇಳಿದ್ದಾರೆ.

ಈ ಹಿಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ-ಆರ್​​ಜೆಡಿ ಒಟ್ಟಿಗೆ ಕಣಕ್ಕಿಳಿದು ಚುನಾವಣೆ ಎದುರಿಸಿದ್ದವು. ಇದೀಗ ಮತ್ತೊಮ್ಮೆ ಬಿಹಾರದಲ್ಲಿ ಸರ್ಕಾರ ರಚನೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವ ಹಾಗೇ ಕಾಣಿಸುತ್ತಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರವಿಶಂಕರ್​ ಪ್ರಸಾದ್​,ಗಿರಿರಾಜ್​ ಸಿಂಗ್​,ಅಶ್ವಿನ್​ ಕುಮಾರ್​ ಚೌಧರಿ, ನಿತ್ಯಾನಂದ್ ರಾಯ್​, ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್​ ಜೈಸ್ವಾಲ್​,ಬಿಹಾರ ಉಪಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗಿಯಾಗಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا