Urdu   /   English   /   Nawayathi

ಹೊಸ ವೈರಸ್​ ಸೋಂಕು ಖಚಿತ ಪಡಿಸಿದ ಜಪಾನ್​.. ಯಾವುದೀ ಭಯಾನಕ ರೋಗ!

share with us

ಟೋಕಿಯೊ: 16 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಹೊಸ ಪರಿಧಮನಿಯ ಕೊರೊನಾವೈರಸ್‌ನಿಂದ ಉಂಟಾದ ನ್ಯುಮೋನಿಯಾ ತರಹದ ಅನಾರೋಗ್ಯದ ಮೊದಲ ಪ್ರಕರಣ ಜಪಾನ್‌ನಲ್ಲಿ ಪತ್ತೆಯಾಗಿದೆ ಎಂದು ಆ ರಾಷ್ಟ್ರದ ಆರೋಗ್ಯ ಸಚಿವಾಲಯ ಗುರುವಾರ ದೃಢಪಡಿಸಿದೆ. ಚೀನಾದಲ್ಲಿ ಇತ್ತೀಚೆಗೆ ಈ ವೈರಸ್ ಪತ್ತೆಯಾಗಿದ್ದು, ಅಲ್ಲಿ 40 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಒಂದು ಸಾವೂ ಕೂಡಾ ಸಂಭವಿಸಿತ್ತು. ಈ ವೈರಸ್​ ಪೀಡಿತ ರೋಗಿಯು ಜಪಾನ್‌ನ ಕನಗಾವಾ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದು, ಆತ ಚೀನಾ ಮೂಲದ ವ್ಯಕ್ತಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ತಿಂಗಳ ಆರಂಭದಲ್ಲಿ ವೈರಸ್​ ಪೀಡಿತ ವ್ಯಕ್ತಿ ಚೀನಾದ ಹುಬೈ ಪ್ರಾಂತ್ಯದ ವುಹಾನ್‌ಗೆ ಭೇಟಿ ನೀಡಿದ್ದರು. ಈ ವೇಳೆ ಈ ವ್ಯಕ್ತಿಗೆ ಕೊರೋನಾ ವೈರಸ್​​​​ ಹರಡಿ ಸೋಂಕು ಕಂಡು ಬಂದಿದೆ ಎಂದು ಜಪಾನ್​ ಸಚಿವರು ಸ್ಪಷ್ಟ ಪಡಿಸಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫೆಕ್ಷಕ್ಸ್ ಡಿಸೀಸಸ್ ನಡೆಸಿದ ಪರೀಕ್ಷೆಗಳು ಈ ವೈರಸ್​ ಇರುವುದನ್ನು ದೃಢ ಪಡಿಸಿವೆ. 

ಈ ರೋಗ ಹರಡಿದ್ದು ಹೇಗೆ? : ರೋಗಿಯು ವುಹಾನ್​​​​​ ಮೀನು ಹಾಗೂ ಸಮುದ್ರಾಹಾರ ಮಾರುಕಟ್ಟೆಗಳಿಗೆ ಭೇಟಿ ನೀಡಿದ ವೇಳೆ ಈ ವೈರಸ್​ ಸೇರಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ರೋಗಿಯು ತಾವು ಯಾವುದೇ ಕಾರಣಕ್ಕೂ ಮಾರುಕಟ್ಟೆಗೆ ಭೇಟಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ ಥಾಯ್ಲೆಂಡ್​​ನಲ್ಲಿ ಚೀನಾ ಹೊರತಾಗಿ ಮೊದಲ ಪ್ರಕರಣ ವರದಿಯಾಗಿತ್ತು. ಈ ಪ್ರಕರಣದ ಬಳಿಕ ಜಪಾನ್​ನಲ್ಲೂ ಈ ಭಯಾನಕ ವೈರಸ್​ ಪತ್ತೆಯಾಗಿದೆ. ಇನ್ನು ದಕ್ಷಿಣ ಕೊರಿಯಾ ಕೂಡ ಅನುಮಾನಾಸ್ಪದ ವೈರಸ್​ ಹರಡುವಿಕೆಯನ್ನ ವರದಿ ಮಾಡಿದೆ.

ಮುನ್ನೆಚ್ಚರಿಕೆ ನೀಡಿದ ಸರ್ಕಾರ: ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣುವಂತೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಪಾನ್​ ಸರ್ಕಾರ ತನ್ನ ಪ್ರಜೆಗಳಿಗೆ ಮನವಿ ಮಾಡಿದೆ.

ಈ ವೈರಸ್​ ಹೇಗೆ ಹರಡುತ್ತೆ: ಕರೋನವೈರಸ್​ಗಳು ಸಾಮಾನ್ಯವಾಗಿ ಶೀತ-ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುತ್ತವೆ ಮತ್ತು ಸೀನುವಿಕೆ, ಕೆಮ್ಮು ಅಥವಾ ನೇರ ಸಂಪರ್ಕದ ಮೂಲಕ ಹರಡುತ್ತವೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا