Urdu   /   English   /   Nawayathi

ಕಪಾಲ ಬೆಟ್ಟ ಗೋಮಾಳದ ಸ್ಥಳವಾದರೆ, ಅದನ್ನು‌ ಕೊಟ್ಟ ಸರ್ಕಾರದ ವಿರುದ್ಧ ಮಾತನಾಡಲಿ : ಯು.ಟಿ.ಖಾದರ್

share with us

ಮಂಗಳೂರು: 14 ಜನುವರಿ 2020 (ಫಿಕ್ರೋಖಬರ್ ಸುದ್ದಿ) ದೇವರ ಪ್ರತಿಮೆಯನ್ನು ನಿರ್ಮಾಣ ಮಾಡಲು ಅಡ್ಡಪಡಿಸಲಾಗುತ್ತಿದೆ ಎಂದಾದರೆ ಇದು ಸಣ್ಣ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ ಭಟ್ ಅವರ ಕನಕಪುರ ಚಲೋ ಪ್ರತಿಭಟನೆಯನ್ನು ಖಂಡಿಸಿದರು, ಕಪಾಲ ಬೆಟ್ಟದಲ್ಲಿ ಏಸುವಿನ ಪ್ರತಿಮೆ ಸ್ಥಾಪನೆ ಮಾಡಿದರೆ ಏನು ತೊಂದರೆ ಎಂದು ಪ್ರಶ್ನಿಸಿದರು. ಎಷ್ಟೋ ಮಂದಿ ಅರಣ್ಯ ಭೂಮಿಯನ್ನು ಕಬಳಿಸಿದವರು ಇದ್ದಾರಲ್ಲಾ ಈ ಬಗ್ಗೆ ಯಾಕೆ ಯಾರೂ ಏನೂ ಮಾತನಾಡುತ್ತಿಲ್ಲ. ಅಲ್ಲಿನ ಸೋದರತೆ ಸೌಹಾರ್ದತೆಯನ್ನು ಒಡೆಯಬೇಕೆಂದು ಇದರ ಹಿಂದಿನ ಉದ್ದೇಶವಾಗಿದೆ. ದುಬೈಯಲ್ಲಿ ದೇವಸ್ಥಾನ ಕಟ್ಟಲು‌ ಸ್ಥಳ ಕೊಟ್ಟಿದ್ದಾರೆ. ಇಂಗ್ಲೆಂಡ್​, ಅಮೆರಿಕದಲ್ಲೂ ದೇವಸ್ಥಾನ, ಮಸೀದಿ ನಿರ್ಮಾಣಕ್ಕೂ ಸ್ಥಳಗಳು ದೊರಕುತ್ತಿದೆ, ಡಿಕೆಶಿಯವರು ಆ ಸ್ಥಳವನ್ನು ಕಾನೂನು ಬದ್ಧವಾಗಿ ಖರೀದಿ ಮಾಡಿದ್ದಾರೆ. ಸರಕಾರ ಅವರಿಗೆ ಕೊಟ್ಟಿದೆ. ಗೋಮಾಳವನ್ನು ಡಿಕೆಶಿ ಅವರಿಗೆ ಕೊಟ್ಟ ಸರ್ಕಾರದ ವಿರುದ್ಧ ಮಾತನಾಡಲಿ. ಅದರ ಬದಲು‌ ಕ್ರಿಶ್ಚಿಯನ್ ಸಮುದಾಯದ ವಿರುದ್ಧವಾಗಿ ಯಾಕೆ ಮಾತನಾಡಬೇಕು. ಆ ಸಮುದಾಯ ಮತ್ತು ಇದಕ್ಕೆ ಏನು ಸಂಬಂಧ ಎಂದು ಯು.ಟಿ.ಖಾದರ್ ಪ್ರಶ್ನಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا