Urdu   /   English   /   Nawayathi

ಟ್ರಂಪ್ ತಣ್ಣಗಾದರೂ ಸುಮ್ಮನಿರದ ಇರಾನ್; ಅಮೆರಿಕ ರಕ್ಷಣಾ ಸಚಿವಾಲಯ ಕಪ್ಪುಪಟ್ಟಿಗೆ ಸೇರಿಸುವ ಕಾನೂನು ಜಾರಿಗೆ ಅಧ್ಯಕ್ಷ ಕರೆ

share with us

ಟೆಹ್ರಾನ್: 14 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಅಮೆರಿಕದ ರಕ್ಷಣಾ ಇಲಾಖೆಯನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿ ಕಪ್ಪುಪಟ್ಟಿಗೆ ಸೇರಿಸುವಂತಾಗುವ ಕಾನೂನು ಜಾರಿಗೆ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಸೋಮವಾರ ಆದೇಶವೊಂದನ್ನು ಹೊರಡಿಸಿದ್ದಾರೆ. ಇರಾನ್ ಸಂಸತ್ ಈಗಾಲೇ ಅಂಗೀಕರಿಸಿರುವ ಕಾನೂನು ಅನ್ನು ಇರಾನ್ನ ಸಂಬಂಧಿತ ಸಂಸ್ಥೆಗಳು ಅಂಗೀಕರಿಸಬೇಕು ಎಂದು ರೌಹಾನಿ ಕರೆ ನೀಡಿದ್ದಾರೆ. ಅಮೆರಿಕದ ರಕ್ಷಣಾ ಸಚಿವಾಲಯದ ಎಲ್ಲ ಸದಸ್ಯರು, ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ಮತ್ತು ಕಂಪೆನಿಗಳು ಮತ್ತು ಇಸ್ಲಾಮಿಕ್ ರೆವಲ್ಯೂಷನ್ ಗಾಡ್ರ್ಸ್ ಕೋರ್ನ ಕುಡ್ಸ್ನ ಮಾಜಿ ಕಾಮಾಂಡರ್ ಖಾಸೆಮ್ ಸೊಲೆಮಾನಿ ಹತ್ಯೆಗೆ ಸಂಚು ರೂಪಿಸಿದ ಅಮೆರಿಕದ ಕಮಾಂಡರ್ಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬ ನಿರ್ಣಯದ ಪರ ಜನವರಿ 7ರಂದು ಇರಾನ್ ಸಂಸತ್ನಲ್ಲಿ ಮತ ಹಾಕಲಾಗಿತ್ತು. ಇರಾನ್ನ ಪರಮೋಚ್ಛ ಶಾಸಕಾತ್ಮಕ ಸಂಸ್ಥೆಯಾದ ಗಾರ್ಡಿಯನ್ ಕೌನ್ಸಿಲ್ ಆಫ್ ಕಾನ್ಸಿಟಿಟ್ಯೂಷನ್ ಈ ಕಾನೂನು ಜಾರಿಗೊಳಿಸಿತ್ತು. ಪಶ್ಚಿಮ ಏಷ್ಯಾದಲ್ಲಿ ನಿಯೋಜನೆಗೊಂಡಿರುವ ಅಮೆರಿಕ ಪಡೆಗಳನ್ನು ವಿದೇಶಿ ಭಯೋತ್ಪಾದಕ ಸಂಘಟನೆ ’ ಎಂದು 2019ರ ಏಪ್ರಿಲ್ ನಲ್ಲಿ ಇರಾನ್ನ ರಾಷ್ಟ್ರೀಯ ಭದ್ರತಾ ಮಂಡಳಿ ಪ್ರಕಟಿಸಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا