Urdu   /   English   /   Nawayathi

ಇರಾನ್​ ವಾಯುಮಾರ್ಗದಲ್ಲಿ ಸದ್ಯಕ್ಕೆ ಸಂಚಾರ ಬೇಡ; ಇಎಎಸ್​ಎ ಎಚ್ಚರಿಕೆ ಸಂದೇಶ

share with us

ಬ್ರುಸೆಲ್ಸ್: 12 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಸಂಘರ್ಷ ಪೀಡಿತ ಇರಾನ್ ನಲ್ಲಿ ಸದ್ಯಕ್ಕೆ ವಾಯು ಸಂಚಾರ ಬೇಡ ಎಂದು ಯುರೋಪಿಯನ್​ ಒಕ್ಕೂಟದ ವಾಯುಯಾನ ಸುರಕ್ಷತಾ ಸಂಸ್ಥೆ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಉಕ್ರೇನ್​ ವಿಮಾನವನ್ನು ಹೊಡೆದುರುಳಿಸಿದ್ದು ತಾವೇ ಎಂದು ಇರಾನ್​ ಸೇನೆ ಒಪ್ಪಿಕೊಂಡಿದ ಬೆನ್ನಲ್ಲೇ ಯುರೋಪಿಯನ್​ ಒಕ್ಕೂಟದ ವಾಯುಯಾನ ಸುರಕ್ಷತಾ ಸಂಸ್ಥೆ ಎಲ್ಲ ಏರ್​ಲೈನ್ಸ್​ಗಳಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದು, ತನ್ನ ಮುಂದಿನ ಆದೇಶದವರೆಗೂ ಇರಾನ್ ವಾಯು ಗಡಿ ಬಳಕೆ ಬೇಡ ಎಂದು ಹೇಳಿದೆ. ಅಲ್ಲದೆ, ವಾಣಿಜ್ಯ ವಿಮಾನಗಳು ತೆಹ್ರಾನ್​ ಪ್ರವೇಶ ಮಾಡುವುದು ಸದ್ಯದ ಮಟ್ಟಿಗೆ ಎಷ್ಟು ಅಪಾಯ ಎಂಬುದನ್ನು ನಾವು ಮೌಲ್ಯಮಾಪನ ಮಾಡಿದ್ದೇವೆ ಎಂದು ತಿಳಿಸಿದೆ. ಮುನ್ಸೂಚನಾ ಕ್ರಮವಾಗಿ ಭದ್ರತಾ ದಳಗಳ ಶಿಫಾರಸಿನ ಮೇರೆಗೆ ಮುಂದಿನ ಸೂಚನೆವರೆಗೂ ಇರಾನ್​ನ ವಾಯುಮಾರ್ಗದಲ್ಲಿ ವಿಮಾನಗಳ ಸಂಚಾರ ಮಾಡದೆ ಇರುವುದು ತುಂಬ ಒಳ್ಳೆಯದು ಎಂದು ಇಎಎಸ್​ಎ​ ಹೇಳಿದೆ. ಇರಾನ್ ಸೇನಾ ಕಮಾಂಡರ್ ಸೊಲೈಮಾನಿ ಬಳಿಕ ಇರಾನ್ ಮತ್ತು ಅಮೆರಿಕ ನಡುವೆ ಸಂಘರ್ಷ ತೀವ್ರಗೊಂಡು, ಇರಾನ್ ಸೇನೆ ಇರಾಕ್ ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್ ಗಳ ಮೇಲೆ ದಾಳಿ ಮಾಡಿತ್ತು. ಬಳಿಕ ಅಮೆರಿಕ ಕೂಡ ತನ್ನ ಮೇಲೆ ದಾಳಿ ಮಾಡಬಹುದು ಎಂಬ ಆಂತಕದಲ್ಲಿದ್ದ ಇರಾನ್, ತನ್ನದೇ ದೇಶದ ಪ್ರಜೆಗಳು ಸಂಚರಿಸುತ್ತಿದ್ದ ಉಕ್ರೇನ್ ವಿಮಾನವನ್ನು ತಪ್ಪಾಗಿ ಗ್ರಹಿಸಿ ಹೊಡೆದುರುಳಿಸಿತ್ತು. ಪರಿಣಾಮ 176 ಮಂದಿ ದುರ್ಮರಣಕ್ಕೀಡಾಗಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا