Urdu   /   English   /   Nawayathi

ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ 7.5 ಲಕ್ಷ ಪರಿಹಾರ

share with us

ತುಮಕೂರು: 11 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಚಿರತೆ ದಾಳಿಗೆ ತುತ್ತಾಗಿ  ಮೃತಪಟ್ಟ ಐದು ವರ್ಷದ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ 7.5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ  ಜಿಲ್ಲೆಯ  ಗುಬ್ಬಿ ತಾಲೊಕಿನ ಮಣಿಕುಪ್ಪೆ ಬಳಿಯ ಅರಣ್ಯ ಪ್ರದೇಶದಲ್ಲಿ ಕಳೆದ ಗುರುವಾರ ಸಂಜೆ ಚಿರತೆಯೊಂದು ದಾಳಿ ನಡೆಸಿ  ಐದು ವರ್ಷದ ಬಾಲಕ ಸಮರ್ಥ್ ಗೌಡನನ್ನು ಕೊಂದು ಹಾಕಿತ್ತು. ಮೃತ ಬಾಲಕ  ತನ್ನ ಅಜ್ಜಿ ಗಂಗಲಕ್ಷಮ್ಮ ರೊಂದಿಗೆ ಮಣಿಕುಪ್ಪೆ ಗ್ರಾಮದಲ್ಲಿ ವಾಸವಾಗಿದ್ದು, ಆತನ  ತಂದೆ ತಾಯಿ  ಹಿರಿ ಮಗನೊಂದಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮರ್ಥ್ ಗೌಡ  ತನ್ನ ಅಜ್ಜಿಯೊಂದಿಗೆ  ಗುರುವಾರ  ಹಸು ಮೇಯಿಸಲು ಮಣಿಕುಪ್ಪೆ ಗ್ರಾಮದ ಹೊರವಲಯದ ಅರಣ್ಯ ಪ್ರದೇಶಕ್ಕೆ ತೆರಳಿದ್ದ,  ಹಸುವನ್ನು ಮೇಯಿಸಿಕೊಂಡು  ವಾಪಸ್ಸು ಮನೆಗೆ ಬರುತ್ತಿದ್ದಾಗ  ಮೊದಲು ಹಸುವಿನ ಮೇಲೆ ದಾಳಿ ನಡೆಸಿದ  ಚಿರತೆ ನಂತರ  ಬಾಲಕ ಮೇಲೆ ಎರಗಿ   ಮಗುವನ್ನು ಸುಮಾರು ದೂರ ಎಳೆದೊಯ್ದಿತ್ತು.  ಗ್ರಾಮಸ್ಥರ ನೆರವಿನೊಂದಿಗೆ ನಂತರ  ಬಾಲಕನ ಮೃತ ದೇಹವನ್ನು ಅರಣ್ಯ ಪ್ರದೇಶದಲ್ಲಿ  ಪತ್ತೆಮಾಡಲಾಗಿತ್ತು. ಚಿರತೆ  ಸಾಮಾನ್ಯವಾಗಿ ಪ್ರಾಣಿಗಳ ಮೇಲೆ ಅಥವಾ ಎತ್ತರದ ಮನುಷ್ಯರ ಮೇಲೆ ದಾಳಿ ನಡೆಸುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಆಗ್ಗಾಗೆ ಚಿರತೆ ಕಂಡು ಬರುತ್ತಿರುವ ಪ್ರದೇಶದಲ್ಲಿ ಮೂರು ಪಂಜರಗಳನ್ನು ಇರಿಸಲಾಗಿದೆ. ಗ್ರಾಮದ ಸುತ್ತಮತ್ತಲ ಪೊದೆಗಳನ್ನು ತೆರವುಗೊಳಿಸಲಾಗಿದೆ ಎಂದು  ವಲಯ ಅರಣ್ಯ ಅಧಿಕಾರಿ  ಹೆಚ್. ಎಲ್. ನಟರಾಜ್  ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا