Urdu   /   English   /   Nawayathi

ನಾಲ್ಕು ದಶಕಗಳ ಕಾಲ ಆಡಳಿತ ನಡೆಸಿದ ಸುಲ್ತಾನ್ ದೊರೆ ಖಬೂಸ್ ವಿಧಿವಶ

share with us

ದುಬೈ: 11 ಜನುವರಿ 2020 (ಫಿಕ್ರೋಖಬರ್ ಸುದ್ದಿ) 1970 ರಿಂದ ದೇಶದ ಮುಖ್ಯಸ್ಥರಾಗಿದ್ದ ಒಮಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಸುಲ್ತಾನ್ ಶುಕ್ರವಾರ ತಡರಾತ್ರಿ ನಿಧನ ಹೊಂದಿದರು ಅವರಿಗೆ ತಮ್ಮ 79 ವರ್ಷ ವಯಸ್ಸಾಗಿತ್ತು. ಅವರು ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಅವರ ಮರಣದ ನಂತರ ರಾಯಲ್ ಕೋರ್ಟ್‌ನ ದಿವಾನ್ ದಿವಂಗತ ಸುಲ್ತಾನ ನಿಧನವಾರ್ತೆಯನ್ನು ಘೋಷಿಸಿದೆ. ಒಮನ್ ನೂತನ ದೊರೆಯನ್ನು ಆಡಳಿತ ಕುಟುಂಬ ಶೀಘ್ರದಲ್ಲಿಯೇ ಆಯ್ಕೆ ಮಾಡಲಿದೆ ಎಂದು ಗಲ್ಫ್ ದೇಶದ ಉನ್ನತ ಸೇನಾ ಮಂಡಳಿ ತಿಳಿಸಿರುವುದಾಗಿ ಮಾಧ್ಯಮ ವರದಿ ವಿವರಿಸಿದೆ. ಒಮನ್ ನಲ್ಲಿ ಎಲ್ಲಾ ಧರ್ಮಕ್ಕೂ ಮುಕ್ತ ಸ್ವಾತಂತ್ರ್ಯ ನೀಡಿದ್ದ ಖಬೂಸ್ ಅವರು ದೇಶದಲ್ಲಿ ನಾಲ್ಕು ಕ್ಯಾಥೋಲಿಕ್ ಚರ್ಚ್, ಪ್ರೊಟೆಸ್ಟಂಟ್ ಚರ್ಚ್ ಹಾಗೂ ಹಲವಾರು ಹಿಂದೂ ದೇವಾಲಯಗಳನ್ನು ನಿರ್ಮಿಸಲು ಹಣಕಾಸು ನೆರವು ನೀಡಿದ್ದರು. ಒಮನ್ ದೇಶದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. 40 ದಿನಗಳ ಕಾಲ ಒಮನ್ ಧ್ವಜವನ್ನು ಅರ್ಧಕ್ಕೆ ಹಾರಿಸಿ ಗೌರವ ಸೂಚಿಸಲಾಗುವುದು ಎಂದು ತಿಳಿಸಿದೆ. 1970ರಲ್ಲಿ ಮಾಜಿ ಬ್ರಿಟನ್ ವಸಾಹತಿಶಾಹಿ ನೆರವಿನೊಂದಿಗೆ ರಕ್ತರಹಿತ ಕ್ರಾಂತಿಯಲ್ಲಿ ಖಬೂಸ್ ಒಮನ್ ದೊರೆಯಾಗಿ ನೇಮಕವಾಗಿದ್ದರು. ಅವರ ನಿಧನದ ಗೌರವಾರ್ಥ ರಾಯಲ್ ಕೋರ್ಟ್‌ನ ದಿವಾನ್ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಮೂರು ದಿನಗಳವರೆಗೆ ಅಧಿಕೃತ ಕೆಲಸ ಸ್ಥಗಿತಗೊಳಿಸುವುದಾಗಿಯೂ ಮತ್ತು ಮುಂದಿನ 40 ದಿನಗಳ ಕಾಲ ರಾಷ್ಟ್ರಮಟ್ಟದಲ್ಲಿ ಅರ್ಧ- ಧ್ವಜ ಹಾರಿಸುವ ಘೋಷಣೆ ಮಾಡಿದೆ. ಸುಲ್ತಾನ್ ಖಬೂಸ್ 1976ರ ಮಾರ್ಚ್ 22ರಂದು ಸಂಬಂಧಿ ಕಮಿಲಾ ಸಯ್ಯಿದಾ ಬಿನ್ ತಾರಿಖ್ ಅಲ್ ಸೈದ್ ಅವರನ್ನು ವಿವಾಹವಾಗಿದ್ದರು. ಆದರೆ 1979ರಲ್ಲಿ ವಿವಾಹ ವಿಚ್ಛೇದನ ಪಡೆದಿದ್ದರು. ಕಮಿಲಾ 2005ರಲ್ಲಿ ಮತ್ತೊಬ್ಬರ ಜತೆ ಪುನರ್ ವಿವಾಹವಾಗಿದ್ದರು. ಖಬೂಸ್ ದಾಂಪತ್ಯದ ವೇಳೆ ಮಕ್ಕಳು ಜನಿಸಿರಲಿಲ್ಲ.ಈ ಹಿನ್ನೆಲೆಯಲ್ಲಿ ಖಬೂಸ್ ನಿಧನ ನಂತರ ಸುಲ್ತಾನ್ ಹುದ್ದೆಗೆ ಯಾರನ್ನು ನೇಮಕ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا