Urdu   /   English   /   Nawayathi

ಸೋನಾಲಿಕಾ ಟ್ರ್ಯಾಕ್ಟರ್ ಶೋರೂಮಿನಲ್ಲಿ ಕಾಣಿಸಿಕೊಂಡ ಬೆಂಕಿ

share with us

ಮುಂಡಗೋಡ: 06 ಜನುವರಿ 2019 (ಫಿಕ್ರೋಖಬರ್ ಸುದ್ದಿ) ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಸೋನಾಲಿಕಾ ಟ್ರ್ಯಾಕ್ಟರ್ ಶೋರೂಮಿನಲ್ಲಿ ಏಕಾಏಕಿ ಬೆಂಕಿ ಹತ್ತಿ ಉರಿದಿದೆ ಎನ್ನಲಾಗಿದೆ. ಆಕಸ್ಮಿಕವಾಗಿ ಶೋರೂಮಿನಲ್ಲಿ ಶಾರ್ಟ್ ಸಕ್ರ್ಯೂಟ್ ಆಗಿ ಬೆಂಕಿ ತಗುಲಿದ ಪರಿಣಾಮ ಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳು ಸುಟ್ಟು ಹೋಗಿವೆ ಎಂದು ಹೇಳಲಾಗಿದೆ. ಶನಿವಾರದಂದು ತಡ ರಾತ್ರಿ ಈ ಘಟನೆ ನಡೆದಿದ್ದು, ಬೆಂಕಿ ಟ್ರ್ಯಾಕ್ಟರಿನ ಒಂದು ಟೈರಿಗೆ ಹತ್ತಿಕೊಂಡಿದ್ದನ್ನು ಕಂಡ ತಕ್ಷಣ ಅಗ್ನಿ ಶಾಮಕದಳದವರಿಗೆ ಕರೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ತಲುಪಿದ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಗಿದೆ. ಈ ಶೋರೂಂ ಪಟ್ಟಣದ ಪ್ರವಾಸಿ ಮಂದಿರದ ಬಳಿ ಇದ್ದು ಸುರೇಶ್ ಮಂಚಲಕರ ಮಾಲಿಕತ್ವದಲ್ಲಿದೆ ಎಂದು ತಿಳಿದು ಬಂದಿದೆ. ಶೋರೂಮಿನಲ್ಲಿ ಸುಮಾರು ಏಳು ಲಕ್ಷ ಮೌಲ್ಯದ ವಸ್ತುಗಳಿದ್ದವು ಎಂದು ಹೇಳಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا