Urdu   /   English   /   Nawayathi

ಎಂಆರ್​ಪಿಎಲ್​ನಲ್ಲಿ ಡ್ರೋನ್ ಕ್ಯಾಮರಾ ಶೂಟಿಂಗ್ ಶಂಕೆ: ಮಂಗಳೂರಲ್ಲಿ ಆತಂಕ!

share with us

ಮಂಗಳೂರು: 06 ಜನುವರಿ 2020 (ಫಿಕ್ರೋಖಬರ್ ಸುದ್ದಿ) ನಗರದ ಪ್ರತಿಷ್ಠಿತ ಸಂಸ್ಥೆ ಎಂಆರ್​ಪಿಎಲ್ ಸುತ್ತಮುತ್ತಲಿನ ನಿಷೇಧಿತ ಪ್ರದೇಶದಲ್ಲಿ ದುಷ್ಕರ್ಮಿಗಳು ಡ್ರೋನ್ ಕ್ಯಾಮರಾದಲ್ಲಿ ಶೂಟಿಂಗ್ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸುರತ್ಕಲ್ ಬಳಿಯಿರುವ ಎಂಆರ್​ಪಿಎಲ್ ಮತ್ತು ಎಸ್​ಇಝಡ್​ನಲ್ಲಿ ಕಳೆದ 10 ದಿನಗಳ ಹಿಂದೆ ಡ್ರೋನ್ ಕ್ಯಾಮರಾ ಮೂಲಕ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಎಂಆರ್​​ಪಿಎಲಲ್​ನ ಚಿಮಿಣಿಗಿಂತ ಮೇಲಿನ ಎತ್ತರದಲ್ಲಿ ಡ್ರೋನ್ ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಿದ್ದಾರೆ. ಒಳಭಾಗದ ವಿಚಾರಗಳನ್ನು ತಿಳಿಯಲು ಈ ಯಾರೋ ಈ ರೀತಿ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಈಟಿವಿ ಭಾರತ್ ನೊಂದಿಗೆ ದೂರವಾಣಿಯಲ್ಲಿ ಪ್ರತಿಕ್ರಿಯೆ ನೀಡಿರುವ ಎಂಆರ್​ಪಿಎಲ್​ ಪಿಆರ್​ಒ ರುಡಲ್ಫ್ ನೊರೋನ್ಹಾ, ಡ್ರೋನ್ ಕ್ಯಾಮರಾದಲ್ಲಿ ಶೂಟಿಂಗ್ ಮಾಡಿರುವ ವಿಷಯವನ್ನು ಜನರಿಂದ ತಿಳಿದುಕೊಂಡಿದ್ದೇವೆ. ನಾವು ಅದನ್ನು ನೇರವಾಗಿ ಗಮನಿಸಿಲ್ಲ. ಸಿಸಿಟಿವಿಯಲ್ಲಿಯೂ ಇದು ದಾಖಲಾಗಿಲ್ಲ. ಈ ಬಗ್ಗೆ ಸಿಐಎಸ್ಎಫ್ ಕೂಡ ಮಾಹಿತಿಯನ್ನು ಪಡೆದುಕೊಂಡಿದೆ. ಈ ಬಗ್ಗೆ ಸಿಐಎಸ್ಎಫ್ ನಿಖರವಾಗಿ ಮಾನಿಟರ್ ಮಾಡುತ್ತಿದ್ದು, ಯಾವುದೇ ಆತಂಕವಿಲ್ಲ. ಎಲ್ಲವನ್ನೂ ನಿಭಾಯಿಸಲು ಸಿಐಎಸ್ಎಫ್ ಶಕ್ತವಾಗಿದೆ ಎಂದು ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا