Urdu   /   English   /   Nawayathi

JNU ಹಿಂಸಾಚಾರ ಖಂಡಿಸಿ ಗೇಟ್​​ವೇ ಆಫ್​​ ಇಂಡಿಯಾ ಎದುರು ಪ್ರತಿಭಟನೆ

share with us

ಮುಂಬೈ(ಮಹಾರಾಷ್ಟ್ರ): 06 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಿನ್ನೆ ನಡೆದ ಹಿಂಸಾಚಾರವನ್ನು ಖಂಡಿಸಿ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಗೇಟ್​​ವೇ ಆಫ್​​ ಇಂಡಿಯಾ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರ ರಾತ್ರಿ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಮಾಸ್ಕ್​ ಧರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಕಾಲೇಜಿನ ಆಸ್ತಿ ಪಾಸ್ತಿಗಳೆಲ್ಲವನ್ನೂ ಹಾಳು ಮಾಡಿದ್ದರು. ಈ ಹಿಂಸಾಚಾರದಲ್ಲಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಗಲಬೆಯಲ್ಲಿ ಜೆ.ಎನ್​.ಯು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷ ಐಷೆ ಘೋಷ್​​ ಗಾಯಗೊಂಡಿದ್ದು, ಈ ಕೃತ್ಯ ನಡೆಸಿದವರು ಅಪರಿಚಿತ ಎಬಿವಿಪಿಯ ಗೂಂಡಾಗಳು ಎಂದು ಕಿಡಿಕಾರಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا