Urdu   /   English   /   Nawayathi

ಲಿಬಿಯಾದ ಮಿಲಿಟರಿ ಶಾಲೆಯ ಮೇಲೆ ವೈಮಾನಿಕ ದಾಳಿ, 23 ವಿದ್ಯಾರ್ಥಿಗಳು ಸಾವು

share with us

ಕೈರೋ: 06 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಲಿಬಿಯಾದ ರಾಜಧಾನಿ ಟ್ರಿಪೋಲಿಯ ಮಿಲಿಟರಿ ಶಾಲೆಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 23 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಇತರೆ ಹಲವಾರು ಜನ ಗಾಯಗೊಂಡಿದ್ದಾರೆ ಎಂದು ಯುಎನ್ ಬೆಂಬಲಿತ ರಾಷ್ಟ್ರೀಯ ಒಪ್ಪಂದದ (ಜಿಎನ್‌ಎ) ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, 23 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯವು ತನ್ನ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ. ಈ ನಡುವೆ ಈ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ ಎಂದೂ ಅಲ್-ಜಜೀರಾ ಟಿವಿ ವರದಿ ಮಾಡಿದೆ. ಮಿಲಿಟರಿ ಶಾಲೆ ಟ್ರಿಪೋಲಿಯ ದಕ್ಷಿಣ ಅಲ್-ಹಡ್ಬಾ ಅಲ್-ಖದ್ರಾ ಜಿಲ್ಲೆಯಲ್ಲಿದ್ದು, ಇದನ್ನು ಪಾಶ್ಚಿಮಾತ್ಯ ಮೂಲದ ಜಿಎನ್‌ಎ ನಿಯಂತ್ರಿಸುತ್ತದೆ. ಏಪ್ರಿಲ್‌ನಿಂದ, ಪ್ರತಿಸ್ಪರ್ಧಿ ಪೂರ್ವ ಮೂಲದ ಅಧಿಕಾರಿಗಳನ್ನು ಬೆಂಬಲಿಸುವ ಲಿಬಿಯಾ ರಾಷ್ಟ್ರೀಯ ಸೇನೆ (ಎಲ್‌ಎನ್‌ಎ) ಟ್ರಿಪೋಲಿಯನ್ನು ವಶಪಡಿಸಿಕೊಳ್ಳುವ ಆಕ್ರಮಣದಲ್ಲಿ ತೊಡಗಿದೆ. ಮಿಲಿಟರಿ ಕಾರ್ಯಾಚರಣೆ ಈ ಪ್ರದೇಶದಲ್ಲಿ ಹಿಂಸಾತ್ಮಕ ಹೋರಾಟದ ತಾಣವಾಗಿ ಪರಿವರ್ತಿಸಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا