Urdu   /   English   /   Nawayathi

ಬಾಟಲಿಯಲ್ಲಿ ಪೆಟ್ರೋಲ್​​ ಹಾಕಲು ನಿರಾಕರಸಿದ್ದಕ್ಕೆ ಬಂಕ್​​​ ನೌಕರನನ್ನೇ ಸುಡಲು ಯತ್ನಿಸಿದ ಭೂಪ!

share with us

ಉತ್ತರ ಪ್ರದೇಶ: 04 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಬಾಟಲಿಯಲ್ಲಿ ಪೆಟ್ರೋಲ್ ಹಾಕಲು ನಿರಾಕರಸಿದ್ದಕ್ಕೆ ಪೆಟ್ರೋಲ್​ ಬಂಕ್​ ನೌಕರನನ್ನೇ ವ್ಯಕ್ತಿಯೊಬ್ಬ ಸುಟ್ಟು ಹಾಕಲು ಪ್ರಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮೊರಾದಾಬಾದ್ ಜಿಲ್ಲೆಯ ಸಿವಿಲ್​ ಲೈನ್ಸ್​​​ ಪೊಲೀಸ್​ ಠಾಣಾ ಪ್ರದೇಶದಲ್ಲಿ ಶುಕ್ರವಾರ ಘಟನೆ ನಡೆದಿದೆ. ತಾನು ತಂದಿದ್ದ ಬಾಟಲಿಯಲ್ಲಿ ಪೆಟ್ರೋಲ್ ಹಾಕುವಂತೆ ವ್ಯಕ್ತಿಯೋರ್ವ ಕೇಳಿದ್ದು, ಪೆಟ್ರೋಲ್​ ಬಂಕ್​ ನೌಕರ ಇದಕ್ಕೆ ನಿರಾಕರಸಿದ್ದಾನೆ. ಇದರಿಂದ ಕೋಪಗೊಂಡ ಆತ, ಬೇರೊಂದು ಪೆಟ್ರೋಲ್​ ಬಂಕ್​ನಿಂದ ಪೆಟ್ರೋಲ್​ ತಂದು ನೌಕರನ ಮೇಲೆ ಸುರಿದು, ಸುಡಲು ಪ್ರಯತ್ನಿದ್ದಾನೆ ಎಂದು ಮೊರಾದಾಬಾದ್ ಎಸ್ಪಿ ಅಮಿತ್​ ಕುಮಾರ್​ ಆನಂದ್​ ತಿಳಿಸಿದ್ದಾರೆ. ಕೊಲೆಗೆ ಯತ್ನ ಆರೋಪದ ಮೇಲೆ ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎಸ್ಪಿ ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا