Urdu   /   English   /   Nawayathi

ಹೊಸ ವರ್ಷಾಚರಣೆ ವೇಳೆ ಅವಘಡ: ಬೆಂಕಿ ಹೊತ್ತಿ ಮೃಗಾಲಯದಲ್ಲಿ 30 ಪ್ರಾಣಿಗಳು ಸಜೀವ ದಹನ

share with us

ಬರ್ಲಿನ್: 02 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಹೊಸ ವರ್ಷದ ಸಂಭ್ರಮಕ್ಕಾಗಿ ಅಳವಡಿಸಿದ್ದ ವಿದ್ಯುತ್ ದೀಪದ ಬೆಳಕು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಂಗಗಳು ಸೇರಿದಂತೆ ಹಲವು ಪ್ರಾಣಿಗಳು ಜೀವಂತವಾಗಿ ಸುಟ್ಟು ಕರಕಲಾಗಿರುವ ಬೀಭತ್ಸ ಘಟನೆ ಜರ್ಮನಿಯ ಪ್ರಾಣಿಸಂಗ್ರಹಾಲಯದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ. ಮಧ್ಯರಾತ್ರಿ ಬೆಂಕಿ ಹೊತ್ತಿಕೊಂಡಿದ್ದರಿಂದ ಝೂನಲ್ಲಿದ್ದ ಸುಮಾರು 30ಕ್ಕೂ ಅಧಿಕ ಮಂಗಗಳು ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಣಿಸಂಗ್ರಹಾಲಯದಲ್ಲಿ ಗೊರಿಲ್ಲಾ, ದೊಡ್ಡ ಜಾತಿಯ ಮಂಗಗಳು, ಜಿಂಪಾಂಚಿಗಳು ಹಾಗೂ ಹೊಸ ತಳಿಯ ಮಂಗಗಳಿದ್ದವು. ಕೇವಲ ಎರಡು ಜಿಂಪಾಂಚಿಗಳು ಬದುಕಿದ್ದು, ಗೊರಿಲ್ಲಾಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಎಂದು ವರದಿ ವಿವರಿಸಿದೆ. ಪೇಪರ್ ನಿಂದ ತಯಾರಿಸಿದ್ದ ಗೂಡು ದೀಪಗಳು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಗಾಳಿಗೆ ಎಲ್ಲೆಡೆ ಹರಡಿತ್ತು ಎಂದು ಪ್ರಾಥಮಿಕ ವರದಿ ತಿಳಿಸಿದೆ.   ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا