Urdu   /   English   /   Nawayathi

ಕೆಎಂಎಫ್ 40 ಕೋಟಿ ಲಾಭದಲ್ಲಿ 25 ಕೋಟಿ ರೈತರಿಗೇ ಮರುಪಾವತಿ: ರೇವಣ್ಣ ಹೇಳಿಕೆ

share with us

ಹಾಸನ: 01 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಹಾಸನ ಹಾಲು ಒಕ್ಕೂಟ ಈ ವರ್ಷ ಮತ್ತೆ ಹೆಚ್ಚು ಲಾಭ ಗಳಿಸಿದ್ದು, ಇದನ್ನ ಹಾಲು ಉತ್ಪಾದಕರಿಗೆ ನೀಡುವ ಉದ್ದೇಶದಿಂದ ಹಾಲು ಖರೀದಿ ದರಗಳನ್ನ ಪ್ರತಿ ಕೆ.ಜಿ.ಗೆ 1.5ರಂತೆ ನೀಡಲಾಗುವುದು ಎಂದು ಹಾಲು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಡಿ.ರೇವಣ್ಣ ಹೇಳಿದ್ರು. ನಗರದ ಡೈರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವರ್ಷ 40ಕೋಟಿ ಲಾಭ ಬಂದಿದ್ದು, ಅದ್ರಲ್ಲಿ 25ಕೋಟಿ ರೂ.ಗಳನ್ನ ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದ್ರು. ಅಲ್ಲದೇ ಇತರ ಜಿಲ್ಲೆ ಮತ್ತು ಒಕ್ಕೂಟಕ್ಕೆ ಹೋಲಿಸಿದ್ರೆ ಹಾಸನ ಹಾಲು ಒಕ್ಕೂಟ ಮೊದಲ ಸ್ಥಾನದಲ್ಲಿದೆ. ಮತ್ತು ಉತ್ಪಾದಕರಿಗೆ ಪಾವತಿಸುವ ದರಗಳು ಶೇ.3.5 ಜಿಡ್ಡು ಮತ್ತು ಶೇ.8.5 ಎಸ್.ಎನ್.ಎಫ್ ಇದ್ದು, ಹಾಲಿನ ಕನಿಷ್ಠ ರೂ.29 ಎಂದು ದರ ನಿಗದಿಪಡಿಸಿದ್ದು, ಈ ದರ ರಾಜ್ಯದಲ್ಲಿಯೇ ಗರಿಷ್ಠ ದರವಾಗಿದೆ ಎಂದ್ರು. ರೈತರ ಸಂಕಷ್ಟ ತಪ್ಪಿಸಲು ಒಕ್ಕೂಟ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಮತ್ತು ರಾಸುಗಳಿಗೆ ಅಪಘಾತ ಮತ್ತು ಆರೋಗ್ಯ ವಿಮೆಯನ್ನ ಒಕ್ಕೂಟದ ವತಿಯಿಂದಲೇ ಮಾಡಿಸಲಾಗುತ್ತಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. ಸುಮಾರು 30 ಸಾವಿರ ಹಾಲು ಉತ್ಪಾದಕರು ಮತ್ತು 5 ಸಾವಿರ ರಾಸುಗಳನ್ನ ವಿಮೆಗೆ ಒಳಪಡಿಸಿ, ಇದಕ್ಕೆಂದೇ 4ಕೋಟಿ ರೂ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಇನ್ನು ಹಾಲು ಉತ್ಪಾದಕರು ಮೃತಪಟ್ಟರೆ ಅವರ ಕುಟುಂಬಕ್ಕೆ 2ಲಕ್ಷ ವಿಮೆ, ರಾಸುಗಳು ಮೃತಪಟ್ಟರೆ ಪ್ರತಿ ಜಾನುವಾರಿಗೆ 50ಸಾವಿರದ ತನಕ ಪರಿಹಾರಧನ ನೀಡಲಾಗುವುದು. ಇಷ್ಟೆಲ್ಲ ಸೌಲಭ್ಯವನ್ನ ಒಕ್ಕೂಟ ಒದಗಿಸುತ್ತಿದ್ದರೂ ಪ್ರಸಕ್ತ ಸಾಲಿನಲ್ಲಿ ಒಕ್ಕೂಟ ಮಾರ್ಚ್​​ 2020ಕ್ಕೆ 15ಕೋಟಿ ನಿವ್ವಳ ಲಾಭಗಳಿಸುವ ಗುರಿಯನ್ನ ಹೊಂದಿದೆ ಎಂದ್ರು. ಇನ್ನು ಒಕ್ಕೂಟದಿಂದ 150ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ ಮಾಡಲಾಗಿರುವ ಪೆಟ್ ಬಾಟಲ್ ಸುವಾಸಿತ ಹಾಲು ಉತ್ಪನ್ನಗಳ ಘಟಕ ನಿರ್ಮಾಣ ಮಾಡಲಾಗಿದ್ದು, ಏಪ್ರಿಲ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಇದಕ್ಕೆ ಸಂಬಂಧಪಟ್ಟ ಯಂತ್ರೋಪಕರಣಗಳನ್ನ ಜರ್ಮನಿಯಿಂದ ತರಿಸಲಾಗಿದೆ ಎಂದು ವಿವಿಧ ಪೆಟ್ ಬಾಟಲ್ ನ ಮಾದರಿಯನ್ನ ಪ್ರದರ್ಶನ ಮಾಡಿ ಮಾಹಿತಿ ನೀಡಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا