Urdu   /   English   /   Nawayathi

ಹೊಸ ವರ್ಷಕ್ಕೆ ಡಬಲ್ ಶಾಕ್; ಸಬ್ಸಿಡಿ ರಹಿತ ಎಲ್ ಪಿ ಜಿ ಬೆಲೆ ಹೆಚ್ಚಳ: ಇಂದಿನಿಂದಲೇ ಜಾರಿ

share with us

ನವದೆಹಲಿ: 01 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಹೊಸ ವರ್ಷದ ಆರಂಭದಲ್ಲೇ ಸರ್ಕಾರ ಗ್ರಾಹಕರಿಗೆ ಕಹಿ ಸುದ್ದಿ ನೀಡಿದೆ, ರೈಲ್ವೆ ಪ್ರಯಾಣದ ದರ ಹೆಚ್ಚಳದ ಜೊತೆಗೆ ಎಲ್ ಪಿ ಜಿ ಬೆಲೆಯೂ ಹೆಚ್ಚಳವಾಗಿ ಗ್ರಾಹಕರಿಗೆ ಡಬಲ್ ಶಾಕ್ ನೀಡಿದೆ. ಸಬ್ಸಿಡಿ ರಹಿತ ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ ಮಾಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದು, ಇಂದಿನಿಂದಲೇ  ಪರಿಷ್ಕೃತ ದರ ಜಾರಿಗೆ ಬರಲಿದೆ. ನವದೆಹಲಿಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 19ರೂ ಏರಿಕೆಯಾಗಿದ್ದರೆ, ಮುಂಬೈನಲ್ಲಿ 19.5 ರೂ. ಹೆಚ್ಚಳವಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ಸದ್ಯ ದೆಹಲಿಯಲ್ಲಿ ಸಬ್ಸಿಡಿ ರಹಿತ ಒಂದು ಎಲ್ಪಿಜಿ ಸಿಲಿಂಡರ್ ಬೆಲೆ 714 ರೂ.ಗಳಿದ್ದರೆ, ಮುಂಬೈನಲ್ಲಿ 684 ರೂ.ಇದೆ. ಡಿಸೆಂಬರ್ ತಿಂಗಳಿನಲ್ಲಿಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 695 ರೂ ಇತ್ತು. ಮುಂಬೈನಲ್ಲಿ 665 ರೂ. ಇತ್ತು. ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಕೂಡ ಸಬ್ಸಿಡಿ ರಹಿತ ಎಲ್ಪಿಜಿ ಗ್ಯಾಸ್ ಬೆಲೆಯಲ್ಲಿ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಗ್ಯಾಸ್ ಬೆಲೆ 21.5 ರೂ. ಏರಿಕೆಯಾದರೆ, ಚೆನ್ನೈನಲ್ಲಿ 20 ರೂ. ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ ಪ್ರತಿ ಎಲ್ಪಿಜಿ ಗ್ಯಾಸ್ ಬೆಲೆ 747 ರೂ ಇದ್ದರೆ, ಚೆನ್ನೈನಲ್ಲಿ 734 ರೂ.ಇದೆ. ಡಿಸೆಂಬರ್ 1ರಿಂದಲೇ 19 ಕೆ.ಜಿ ಸಿಲಿಂಡರ್  ಬೆಲೆಯನ್ನು ಪರಿಷ್ಕೃತಗೊಳಿಸಲಾಗಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا