Urdu   /   English   /   Nawayathi

ಪೌರತ್ವ(ತಿದ್ದುಪಡಿ) ಕಾಯ್ದೆ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

share with us

ಕೇರಳ: 31 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಇಂದು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ಕಾಯ್ದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸಿಎಂ ಪಿಣರಾಯಿ ವಿಜಯನ್‌ ಮಾತನಾಡಿ, ಕೇರಳದಲ್ಲಿ ಯಾವುದೇ ಬಂಧನ ಕೇಂದ್ರಗಳ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ನಮ್ಮ ರಾಜ್ಯದ ನೆಲಕ್ಕೆ ಗ್ರೀಕರು, ರೋಮನ್ನರು, ಅರಬ್ಬರು ಹೀಗೆ ಎಲ್ಲರೂ ಬಂದಿದ್ದು, ಕೇರಳಕ್ಕೆ ಜಾತ್ಯತೀತತೆಯ ಸುದೀರ್ಘ ಇತಿಹಾಸವಿದೆ. ಆರಂಭದಲ್ಲೇ ಕ್ರೈಸ್ತರು, ಮುಸಲ್ಮಾನರು ರಾಜ್ಯಕ್ಕೆ ಬಂದಿದ್ದರು. ನಮ್ಮ ಸಂಪ್ರದಾಯವು ಎಲ್ಲರನ್ನೂ ಒಳಗೊಳ್ಳುತ್ತದೆ. ಈ ಸಂಪ್ರದಾಯವನ್ನು ಉಳಿಸಿಕೊಳ್ಳಲು ವಿಧಾನಸಭೆ ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.

ಪಿಣರಾಯಿ ವಿಜಯನ್​ರ ಈ ನಿರ್ಣಯಕ್ಕೆ ಸಿಪಿಐ(ಎಂ) ಶಾಸಕ ಜೇಮ್ಸ್​ ಮ್ಯಾಥ್ಯೂ, ಸಿ. ದಿವಾಕರನ್​ ಹಾಗೂ ಕಾಂಗ್ರೆಸ್​​ನ ವಿ.ಡಿ. ಸತೀಸನ್​ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಿರ್ಣಯ ಮಂಡಿಸುವ ಮೂಲಕ ಕೇರಳ ವಿಧಾನಸಭೆ ಪ್ರಪಂಚಕ್ಕೆ ಸಂದೇಶ ನೀಡಲಿದೆ ಎಂದು ದಿವಾಕರನ್​ ಹೇಳಿದರು. ಸಿಎಎ ಹಾಗೂ ಎನ್​ಆರ್​ಸಿ, ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಕಾಯ್ದೆ ಸಂವಿಧಾನದ 13, 14 ಹಾಗೂ 15ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಎಂದು ಸತೀಸನ್ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ ಇದು ಸಂಕುಚಿತ ರಾಜಕೀಯ ಮನೋಭಾವವನ್ನು ತೋರಿಸುತ್ತದೆ ಎಂದು ಹೇಳಿ ಬಿಜೆಪಿ ಶಾಸಕ ರಾಜಗೋಪಾಲ್​, ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا