Urdu   /   English   /   Nawayathi

ಬೆಂಕಿಯಿಂದ ಹೊತ್ತಿ ಉರಿಯುತ್ತಿದೆ ಕಾಂಗರೂ ನಾಡು... ಕಾಳ್ಗಿಚ್ಚಿಗೆ ಇಂದು ಸಹ ಇಬ್ಬರು ಬಲಿ!

share with us

ನ್ಯೂ ಸೌತ್​ ವೇಲ್ಸ್: 31 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಆಸ್ಟ್ರೇಲಿಯಾದ ಕೆಲ ಪ್ರದೇಶಗಳಿಗೆ ಕಾಡಿನ ಬೆಂಕಿ ಆವರಿಸಿದ್ದು, ಇಂದು ಸಹ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಮೃತಪಟ್ಟಿದ್ದಾರೆ. ಕೆಲ ತಿಂಗಳಿನಿಂದ ಆಸ್ಟ್ರೇಲಿಯಾದ ಕಾಡು ಹೊತ್ತಿ ಉರಿಯುತ್ತಿದೆ. ಜನ ಸಂದಣಿ ಹೆಚ್ಚಿರುವ ಪ್ರದೇಶಗಳಾದ ನ್ಯೂ ಸೌತ್​ ವೇಲ್ಸ್​, ಕ್ಯಾನ್‌ಬೆರಾ, ಸಿಡ್ನಿ ಸೇರಿ ಅನೇಕ ಪ್ರದೇಶಗಳಿಗೆ ಕಾಡಿನ ಬೆಂಕಿ ಆವರಿಸುತ್ತಿದೆ. ಕಾಳ್ಗಿಚ್ಚಿನಿಂದಾಗಿ ಈವರೆಗೆ 10 ಜನ ಮೃತಪಟ್ಟಿದ್ದಾರೆ. ಸಾವಿರಾರು ಮನೆಗಳು ಬೆಂಕಿಗಾಹುತಿಯಾಗಿವೆ. ಅದೆಷ್ಟೋ ಪ್ರಾಣಿಗಳು ಸಹ ಪ್ರಾಣಬಿಟ್ಟಿವೆ. ಅನೇಕ ಪ್ರಾಣಿಗಳು ನೀರಿಗಾಗಿ ಕಂಗಾಲಾಗಿವೆ. ಕೆಲವರು ಪ್ರಾಣಿಗಳಿಗೆ ನೀರು ಕುಡಿಸಿ ಮಾನವೀಯತೆ ಮೆರೆದಿದ್ದಾರೆ. ಇತ್ತಿಚೇಗೆ ಆಸ್ಟೇಲಿಯಾದ ಮಾಜಿ ಪ್ರಧಾನಿ ಟಾನಿ ಎಬಾಟ್ ಅಗ್ನಿಶಾಮಕ ದಳದ ಸಮವಸ್ತ್ರದಲ್ಲಿ ಕಂಡು ಬಂದಿದ್ದರು. ಟೋನಿ ಎಬಾಟ್ ಶುಕ್ರವಾರದಂದು ದಕ್ಷಿಣ ಸಿಡ್ನಿಯ ಕಾಡಿಗೆ ತಗುಲಿದ ಬೆಂಕಿ ನಂದಿಸುವ ಕಾರ್ಯಾಚರಣೆಗೆ ತೆರಳಿದ್ದರು. ಟೋನಿ ಎಬಾಟ್ 2013ರಿಂದ 2015ರವರೆಗೆ ಆಸ್ಟ್ರೇಲಿಯಾದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಕಿ ಹರಡುತ್ತಿರುವ ಪ್ರದೇಶಕ್ಕೆ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಹೋಗದಂತೆ ಸರ್ಕಾರ ಆದೇಶಿದೆ

 ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا