Urdu   /   English   /   Nawayathi

ಗುತ್ತಿಗೆ ಕಾರ್ವಿುಕರಿಗೆ ಗೇಟ್​ಪಾಸ್

share with us

ಕಾರವಾರ: 28 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್ (ಕ್ರಿಮ್್ಸ)ನ 50 ಕ್ಕೂ ಅಧಿಕ ಗುತ್ತಿಗೆ ಕಾರ್ವಿುಕರನ್ನು ಕೆಲಸದಿಂದ ತೆಗೆಯುವುದಾಗಿ ನಿರ್ದೇಶಕರು ತಿಳಿಸಿದ್ದು, ಕಾರ್ವಿುಕರು ಪ್ರತಿಭಟನೆಗೆ ಇಳಿದಿದ್ದಾರೆ. ಮೆಡಿಕಲ್ ಕಾಲೇಜ್​ನ 185 ಕ್ಕೂ ಅಧಿಕ ನೌಕರರು ಸ್ಕೈಲೈನ್, ಭಾರತ, ಮಧುರಾ ಹಾಗೂ ಯುನಿವರ್ಸಲ್ ಎಂಬ ನಾಲ್ಕು ಹೊರ ಗುತ್ತಿಗೆ ಏಜೆನ್ಸಿಗಳಡಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಜೆನ್ಸಿಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು, ಹೊಸ ಟೆಂಡರ್ ಪ್ರಕಾರ ಕಾರ್ವಿುಕರ ಸಂಖ್ಯೆಯನ್ನು 100 ಕ್ಕೆ ಮಿತಿಗೊಳಿಸಲಾಗಿದೆ. ಇದರಿಂದ ಕೆಲವರನ್ನು ಮಾತ್ರ ಮುಂದುವರಿಸಲಾಗುವುದು ಎಂದು ಕಾಲೇಜ್​ನ ನಿರ್ದೇಶಕರು ತಿಳಿಸಿದ್ದಾರೆ. ಕೆಲಸದಿಂದ ತೆಗೆಯುವ ಭಯದಲ್ಲಿ ಕಾರ್ವಿುಕರು ಶುಕ್ರವಾರ ಮಧ್ಯಾಹ್ನ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಯುನಿವರ್ಸಲ್ ಏಜೆನ್ಸಿಯ ಅಧಿಕಾರಿ ಗೋವಿಂದಯ್ಯ ಅವರಿಗೆ ಘೇರಾವ್ ಹಾಕಿದರು. ನಂತರ ಕಾಲೆಜ್ ನಿರ್ದೇಶಕ ಡಾ.ಶಿವಾನಂದ ದೊಡ್ಮನಿ ಕಾರ್ವಿುಕರು ಹಾಗೂ ಏಜೆನ್ಸಿ ಮುಖ್ಯಸ್ಥರ ಸಭೆ ನಡೆಸಿದರು. ಕಾರ್ವಿುಕ ಕಲ್ಯಾಣ ಇಲಾಖೆ ಅಧಿಕಾರಿ ಚೇತನ್, ಪಿಎಸ್​ಐ ಸಂತೋಷ ಕೂಡ ಇದ್ದರು.

ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರಿಂದ ನಡತೆ ಪ್ರಮಾಣಪತ್ರ ಪಡೆದುಬಂದ ಕಾರ್ವಿುಕನನ್ನು ಮಾತ್ರ ಕೆಲಸದಲ್ಲಿ ಮುಂದುವರಿಸಲಾಗುವುದು. ಉಳಿದವರು 2020 ರ ಜ.1 ರಿಂದ ಉದ್ಯೋಗಕ್ಕೆ ಬರುವ ಅವಶ್ಯಕತೆ ಇಲ್ಲ. ಬಂದಲ್ಲಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಕ್ರಿಮ್್ಸ ನಿರ್ದೇಶಕರು ಕಾರ್ವಿುಕರ ಸಭೆಯಲ್ಲಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನೌಕರರಿಗೆ 3 ತಿಂಗಳಿಂದ ವೇತನವಿಲ್ಲ. ಪಿಎಫ್, ಇಎಸ್​ಐ ಗಳನ್ನು ಕೊಡದೇ ಮೋಸ ಮಾಡಲಾಗಿದೆ. ಇದನ್ನು ಕೇಳಲು ಡೀನ್ ಬಳಿ ಹೋದರೆ ಕೆಲಸದಿಂದ ತೆಗೆಯುವ ಬೆದರಿಕೆ ಒಡ್ಡುತ್ತಿದ್ದಾರೆ. ಕಾರ್ವಿುಕ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸ್ಪಂದಿಸುತ್ತಿಲ್ಲ. ಶಾಸಕರು ಬೆಂಬಲಿಸುತ್ತಿಲ್ಲ. ನಾವು ಕುಟುಂಬ ಸಮೇತ ಪ್ರತಿಭಟನೆ ನಡೆಸುತ್ತೇವೆ. | ವಿಲ್ಸನ್ ಫರ್ನಾಂಡಿಸ್ ಸರ್ಕಾರಿ ಮೆಡಿಕಲ್ ಕಾಲೇಜ್ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ

ಹೊರ ಗುತ್ತಿಗೆ ಕಂಪನಿಗಳ ಟೆಂಡರ್ ಅವಧಿ ಮುಕ್ತಾಯವಾಗಿದೆ. ಕಾರ್ವಿುಕರನ್ನು ಕೆಲಸದಲ್ಲಿ ಇಟ್ಟುಕೊಳ್ಳುವುದು, ಬಿಡುವುದು ಹೊಸ ಗುತ್ತಿಗೆ ಕಂಪನಿಗೆ ಬಿಟ್ಟ ವಿಚಾರ. ಕೆಲವು ಕಾರ್ವಿುಕರು ಅಧಿಕೃತ ಆದೇಶ ಪತ್ರವಿಲ್ಲದೇ ಇಲ್ಲಿ ಸೇರಿಕೊಂಡಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದೇನೆ. | ಡಾ.ಶಿವಾನಂದ ದೊಡ್ಮನಿ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ದೇಶಕ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا