Urdu   /   English   /   Nawayathi

ಪಾರ್ಟಿ ನಡೆಯುತ್ತಿದ್ದ ಮನೆಯ ಮೇಲೆ ಗುಂಡಿನ ದಾಳಿ 13 ಮಂದಿಗೆ ಗಾಯ

share with us

ಶಿಕಾಗೊ(ಅಮೆರಿಕ): 25 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಶಿಕಾಗೊದಲ್ಲಿರುವ ಮನೆಯೊಂದರಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ನಡೆದ ಗುಂಡಿನ ದಾಳಿಯಲ್ಲಿ 13 ಜನರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಶಿಕಾಗೊ ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್​ನಲ್ಲಿ ಹತನಾದ ವ್ಯಕ್ತಿಯ ಸ್ಮರಣಾರ್ಥ ಮನೆಯಲ್ಲಿ ಪಾರ್ಟಿ ನಡೆಸಲಾಗುತ್ತಿತ್ತು. ಈ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. 16 ರಿಂದ 48 ವರ್ಷದೊಳಗಿನ 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀರು ತಿಳಿಸಿದ್ದಾರೆ. ಘಟನೆ ಸಂಬಂಧ ಇಬ್ಬರನ್ನ ವಿಚಾರಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಒಬ್ಬ ಶಸ್ತ್ರಾಸ್ತ ಸಮೇತ ಸಿಕ್ಕಿಬಿದ್ದಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿಂದೆ ನಡೆದಿರುವ ಕೊಲೆಗೂ, ಈ ಶೂಟೌಟ್​ಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا