Urdu   /   English   /   Nawayathi

ಹೌದೌದು,, ಪ್ಲಾಸ್ಟಿಕ್‌ನಿಂದ ಇಂಧನ ತಯಾರಿಸಬಹುದು.. ಅದ್ಹೇಗೆ ಅಂತೀರಾ, ಇಲ್ನೋಡಿ!!

share with us

ಪುಣೆ(ಮಹಾರಾಷ್ಟ್ರ): 23 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಾವು ಬಳಸುವ ಹಲವಾರು ವಸ್ತುಗಳು ಪ್ಲಾಸ್ಟಿಕ್​. ಅದು​​ ನಮ್ಮ ಜೀವನದ ಒಂದು ಭಾಗ ಆಗಿದೆ. ತ್ಯಾಜ್ಯವೆಂದು ಎಸೆದ ಪ್ಲಾಸ್ಟಿಕ್​ ಪರಿಸರಕ್ಕೆ ಮಾರಕ. ಆದರೆ, ಅದರ ಮರುಬಳಕೆಯಿಂದ ಸಿಗುವ ಪ್ರತಿ ಅಂಶವೂ ಉಪಯುಕ್ತ. ಅದು ಹೇಗಂದ್ರೆ ಹೀಗೆ. ತಟ್ಟಿದರೆ ಬೆರಣಿಯಾದೆ.. ಸುಟ್ಟರೆ ವಿಭೂತಿಯಾದೆ, ನೀನಾರಿಗಾದೆಯೋ ಎಲೇ ಮಾನವ. ಗೋಮಾತೆಯ ಸಗಣಿಯ ಈ ಯಶೋಗಾಥೆ ಯಾರಿಗೆ ಗೊತ್ತಿಲ್ಲ. ಆದರೆ, ಪರಿಸರಕ್ಕೆ ಮಾರಕ ಪ್ಲಾಸ್ಟಿಕ್​ ಕೂಡ ಈಗ ಅದೇ ರಾಗ ಹಾಡುತ್ತಿದೆ. ಪ್ಲಾಸ್ಟಿಕ್​ ಸಂಸ್ಕರಣಾ ವೇಳೆ ಉತ್ಪತ್ತಿಯಾಗೋ ಪ್ರತಿ ಅಂಶವೂ ವಿಭಿನ್ನ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಈ ವಿನೂತನ ಆವಿಷ್ಕಾರ ಅರೆಕ್ಷಣ ಚಕಿತಗೊಳಿಸುತ್ತೆ. ಪಳೆಯುಳಿಕೆ ಇಂಧನಗಳು ವೇಗವಾಗಿ ಕ್ಷೀಣಿಸುತ್ತಿವೆ. ಅವು ಪರಿಸರಕ್ಕೂ ಹಾನಿ. ಜಾಗತಿಕ ತಾಪಮಾನ ಏರಿಕೆ ತಡೆಗೆ ವಿಶ್ವ ಸಮುದಾಯ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವತ್ತ ಶ್ರಮಿಸ್ತಿದೆ. ಆದರೆ, ಇದರ ಜಾಗವನ್ನ ಪ್ಲಾಸ್ಟಿಕ್​ ತುಂಬುತ್ತೆ ಅಂದ್ರೆ ಆಶ್ಚರ್ಯ ಎನಿಸೋಲ್ವೇ.. ಪುಣೆ ಮಹಾನಗರ ಪಾಲಿಕೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಪರ್ಯಾಯ ತಂದಿದೆ. ಸುಮಾರು 10 ಕೆಜಿ ಪ್ಲಾಸ್ಟಿಕ್​ನಿಂದ 6 ಲೀಟರ್​ ಇಂಧನ ತಯಾರಿಸ್ಬಹುದಂತೆ. ಪಾಲಿಕೆ ನಾರಾಯಣಪುರದಲ್ಲಿ ಇಂಧನ ಉತ್ಪಾದನಾ ಕಾರ್ಖಾನೆಗಳನ್ನು ಸ್ಥಾಪಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆಯ ಪ್ರತಿ ಘಟ್ಟದಲ್ಲೂ ತಯಾರಾಗೋ ತ್ಯಾಜ್ಯದ ವಿವಿಧ ಅಂಶಗಳನ್ನು ವಿಭಿನ್ನ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ತ್ಯಾಜ್ಯ ದ್ರವೀಕರಿಸಿ ಜೆನರೇಟರ್​, ಸ್ಟೌವ್​, ಬಾಯ್ಲರ್‌​ಗಳಿಗೆ ಇಂಧನವಾಗಿ ಬಳಸಲಾಗುತ್ತದೆ. ಸಂಸ್ಕರಣೆ ವೇಳೆ ಬಿಡುಗಡೆಯಾಗೋ ಗ್ಯಾಸ್‌ನ ಕಾರ್ಖಾನೆಯ ಯಂತ್ರಗಳನ್ನು ಚಲಾಯಿಸಲು ಬಳಸಲಾಗುತ್ತೆ. ಇನ್ನೂ ಕೊನೆಗೆ ಉಳಿಯುವ ಇದ್ದಿಲನ್ನೂ ರಸ್ತೆ ಕಾಮಗಾರಿಗೂ ಬಳಸಲಾಗುತ್ತೆ. ಈ ಯೋಜನೆಯ ಮೂಲಕ ವಿವಿಧ ಪುರಸಭೆಯ ವಾರ್ಡ್‌ಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡಬಹುದು. ಅಲ್ಲದೆ, ಸದ್ಯಕ್ಕೆ ಹೆಚ್ಚುತ್ತಿರುವ ಪ್ಲಾಸ್ಟಿಕ್ ಹಾವಳಿ ತಡೆಗೆ 'ಪ್ಲಾಸ್ಟಿಕ್ ಇಂಧನ ಸ್ಥಾವರಗಳು ಅತ್ಯುತ್ತಮ ಪರಿಹಾರ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا