Urdu   /   English   /   Nawayathi

ಇಂದು ನವದೆಹಲಿಯಲ್ಲಿ ಭಾರತ-ಚೀನಾ ಗಡಿ ಕುರಿತು ಮಾತುಕತೆ

share with us

ನವದೆಹಲಿ: 21 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಭಾರತ-ಚೀನಾ ಗಡಿ ಪ್ರಶ್ನೆ ವಿಚಾರವಾಗಿ ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ 22ನೇ ಸಭೆ ಇಂದು ನವದೆಹಲಿಯಲ್ಲಿ ನಡೆಯಲಿದೆ. ಭಾರತದ ನಿಯೋಗದ ನೇತೃತ್ವವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಹಿಸಿದರೆ, ಚೀನಾ ಪರವಾಗಿ ರಾಜ್ಯ ಕೌನ್ಸೆಲರ್ ಮತ್ತು ವಿದೇಶಾಂಗ ಸಚಿವ ವಾಂಗ್ ಯಿ ನೇತೃತ್ವ ವಹಿಸಲಿದ್ದಾರೆ ಎಂದು ಎಂಇಎ ಪ್ರಕಟಣೆಯಲ್ಲಿ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಯ ನಂತರ ನಡೆಯುತ್ತಿರುವ ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ ಮೊದಲ ಸಭೆ ಇದಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا