Urdu   /   English   /   Nawayathi

ಫಿಲಿಪೈನ್ಸ್‌ನಲ್ಲಿ 6.8 ತೀವ್ರತೆಯ ಭೂಕಂಪನ: ಕನಿಷ್ಠ ಏಳು ಮಂದಿ ಸಾವು

share with us

ಮನಿಲಾ: 15 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಫಿಲಿಪೈನ್ಸ್‌ನ ದಕ್ಷಿಣ ಮಿಂಡಾನಾವೊ ದ್ವೀಪದಲ್ಲಿ ಭಾನುವಾರ ಸಂಭವಿಸಿದ 6.8 ತೀವ್ರತೆಯ ಭೂಕಂಪನದ ಪರಿಣಾಮವಾಗಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ದಾವೊ ಡೆಲ್ ಸುರ್ ಪ್ರಾಂತೀಯ ವಿಪತ್ತು ಕಡಿತ ಮತ್ತು ನಿರ್ವಹಣಾ ಕಚೇರಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮ್ಯಾಗ್ಸೆಸೆ ಪಟ್ಟಣದ ಆಗ್ನೇಯಕ್ಕೆ 3 ಕಿ.ಮೀ.ದೂರದಲ್ಲಿ ಜಾಗತಿಕ ಕಾಲಮಾನದಲ್ಲಿ 6:11ಕ್ಕೆ ಕಂಪನ ಸಂಭವಿಸಿದೆ. ಭೂಕಂಪನದಿಂದಾಗಿ 6 ವರ್ಷದ ಬಾಲಕಿ ಸಾವನ್ನಪ್ಪಿದ್ದರೆ, ಇನ್ನೂ 37 ಜನರು ಗಾಯಗೊಂಡಿದ್ದಾರೆ ಎಂದು ಹಿಂದಿನ ವರದಿಗಳು ಸೂಚಿಸಿವೆ. ಭೂಕಂಪನದ ತೀವ್ರತೆಗೆ ಐದು ಕಿ.ಮೀ ವ್ಯಾಪ್ತಿಯಲ್ಲಿನ ಕಟ್ಟಡಗಳಿಗೆ ಗಂಭೀರ ಹಾನಿಯಾಗಿದೆ. ಪಾಡಾಡ ಪಟ್ಟಣದಲ್ಲಿ ಸೂಪರ್‌ ಮಾರ್ಕೆಟ್‌ ಕಟ್ಟಡವೊಂದು ಕುಸಿದು ಸೋಮವಾರ ರಕ್ಷಕರು ಇನ್ನೂ ಆರು ಮೃತ ದೇಹಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಫಿಲ್ಸ್ಟಾರ್ ಗ್ಲೋಬಲ್ ಪತ್ರಿಕೆ ವರದಿ ಮಾಡಿದೆ, ಆದರೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಮಟನಾವೋ ಪಟ್ಟಣದ ಮೇಯರ್, ಭೂಕಂಪನದಿಂದಾಗಿ 2 ಬಹು ಮಹಡಿ ಕಟ್ಟಡಗಳು ಜಖಂ ಆಗಿವೆ. ಅಲ್ಲದೆ ಎರಡು ಮೇಲ್ಸೇತುವೆಗಳು ಮತ್ತು ಸಣ್ಣಪುಟ್ಟ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا