Urdu   /   English   /   Nawayathi

ಖರೀದಿಸಿದರೂ ಮಾಲೀಕರ ಕೈಸೇರದ ಫಾಸ್ಟ್ಯಾಗ್

share with us

ಮಂಗಳೂರು/ಉಡುಪಿ/ಸುರತ್ಕಲ್: 14 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿ.15ರಂದು ಮಧ್ಯರಾತ್ರಿ 12 ಗಂಟೆಯಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸಲು ಕರಾವಳಿಯ ಟೋಲ್ ಬೂತ್‌ಗಳು ಪೂರ್ಣ ಸಜ್ಜಾಗಿವೆ. ಆದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಶೇ.50ಕ್ಕಿಂತಲೂ ಅಧಿಕ ವಾಹನಗಳಲ್ಲಿ ಇನ್ನೂ ಫಾಸ್ಟ್ಯಾಗ್ ಅಳವಡಿಕೆಯಾಗಿಲ್ಲ. ಬಹುತೇಕ ಎಲ್ಲ ಬ್ಯಾಂಕುಗಳಲ್ಲಿ ಹಾಗೂ ಆನ್‌ಲೈನ್ ಮೂಲಕ ಫಾಸ್ಟ್ಯಾಗ್ ವಿತರಣೆ ವ್ಯವಸ್ಥೆ ಇದೆಯಾದರೂ ಎಲ್ಲ ಕಡೆ ತ್ವರಿತ ವಿತರಣೆ ಇಲ್ಲ. ಹಲವು ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಸ್ಟಾಕ್ ಇಲ್ಲ, ಸ್ವಲ್ಪ ದಿನ ಕಾಯಬೇಕು ಎನ್ನುವ ಉತ್ತರ ದೊರೆಯುತ್ತದೆ. ಆನ್‌ಲೈನ್‌ನಲ್ಲಿ ಖರೀದಿಸಿದವರಿಗೆ ಡಿಸ್‌ಪ್ಯಾಚ್ಡ್ ಎಂದು ಮೆಸೇಜ್ ಬಂದಿದೆಯೇ ಹೊರತು ಫಾಸ್ಟ್ಯಾಗ್ ಸ್ಕಿಕರ್ ಇನ್ನೂ ತಲುಪಿಲ್ಲ. ಟೋಲ್ ಬೂತ್‌ಗಳಲ್ಲಿ ಖರೀದಿಸಿದವರಿಗೆ ತ್ವರಿತ ವಿತರಣೆ ಸಾಧ್ಯವಾಗುತ್ತದೆ. ಎನ್‌ಐಟಿಕೆ ಟೋಲ್‌ನಲ್ಲಿ ಶುಕ್ರವಾರವೂ ಪೆಟಿಎಂ ಸಂಸ್ಥೆ ಸಂಜೆ 6ರವರೆಗೆ ಫಾಸ್ಟ್ಯಾಗ್ ವಿತರಿಸಿದೆ. ಸರ್ಕಾರ ಹೇಳಿರುವಂತೆ ಎನ್‌ಎಚ್‌ಎಐ ಉಚಿತವಾಗಿ ಫಾಸ್ಟ್ಯಾಗ್ ವಿತರಿಸುತ್ತಿರುವುದು ಎಲ್ಲೂ ಕಂಡುಬಂದಿಲ್ಲ.

ಏನೇನು ಸಿದ್ಧತೆ?: ದಕ್ಷಿಣ ಕನ್ನಡ ಜಿಲ್ಲೆಯ ಬ್ರಹ್ಮರಕೂಟ್ಲು, ತಲಪಾಡಿ ಮತ್ತು ಸುರತ್ಕಲ್ ಎನ್‌ಐಟಿಕೆಗಳಲ್ಲಿ ಹಾಗೂ ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನಗಳಲ್ಲಿ ಟೋಲ್‌ಗೇಟ್‌ಗಳಿವೆ. ಎಲ್ಲ ಟೋಲ್‌ಗೇಟ್‌ಗಳಲ್ಲೂ ಫಾಸ್ಟ್ಯಾಗ್ ಮೂಲಕ ಸುಂಕ ಸ್ವೀಕಾರಕ್ಕೆ ಸಿದ್ಧತೆ ನಡೆದಿದ್ದು, ಪೊಲೀಸ್ ರಕ್ಷಣೆ ಪಡೆಯಲೂ ತಯಾರಿ ನಡೆದಿದೆ. ವಾಹನಗಳ ಫಾಸ್ಟ್ಯಾಗ್ ರೀಡ್ ಮಾಡಲು ಎಲ್ಲ ಗೇಟ್‌ಗಳಲ್ಲಿ ಪ್ರತ್ಯೇಕ ಸ್ವಯಂಚಾಲಿತ ಸ್ಕಾೃನರ್‌ಗಳನ್ನು ಅಳವಡಿಸಲಾಗಿದ್ದು, ಅದು ತಾಂತ್ರಿಕ ದೋಷದಿಂದ ಸ್ಥಗಿತಗೊಂಡರೆ ಕಾರ್ಯಾಚರಿಸಲು ಅನುಕೂಲವಾಗುವಂತೆ ಮಾನವ ಚಾಲಿತ ಸ್ಕಾೃನರ್ ಕೂಡ ಅಳವಡಿಸಲಾಗಿದೆ ಎಂದು ತಲಪಾಡಿ ಟೋಲ್ ಮ್ಯಾನೇಜರ್ ಶಿವಪ್ರಸಾದ್ ರೈ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಎಲ್ಲ ಟೋಲ್‌ಗಳ ಸಿಸಿಟಿವಿ ಕ್ಯಾಮರಾಗಳಿಗೆ ಕೇಂದ್ರ ಭೂಸಾರಿಗೆ ಸಚಿವಾಲಯದ ತಾಂತ್ರಿಕ ವಿಭಾಗದ ಸಂಪರ್ಕ ಒದಗಿಸಲಾಗಿದೆ. ಮಾಸ್ಟರ್ಸ್‌ ಸಹಿತ ಎಲ್ಲ ಟೋಲ್ ಬೂತ್‌ಗಳಲ್ಲಿ ಕಾರ್ಮಿಕರ ಸಂಖ್ಯೆ ಏರಿಸಲಾಗಿದೆ. ತಲಪಾಡಿ ಟೋಲ್ ಒಂದರಲ್ಲೇ 25, ಬ್ರಹ್ಮರಕೂಟ್ಲು ಟೋಲ್‌ನಲ್ಲಿ 10 ನೌಕರರನ್ನು ಅಧಿಕಗೊಳಿಸಲಾಗಿದೆ. ಯಾವ್ಯಾವ ವಾಹನಗಳು ಯಾವ ಮಾರ್ಗದಲ್ಲಿ ಸಂಚರಿಸಬೇಕು ಎನ್ನುವ ದಿಕ್ಸೂಚಿ ಫಲಕಗಳನ್ನು ಹಾಕಲಾಗುತ್ತಿದೆ.

ಸ್ಥಳೀಯರಿಗೆ ವಿನಾಯಿತಿ ಗೊಂದಲ ಮುಂದುವರಿಕೆ: ಟೋಲ್ ಬೂತ್‌ಗಳಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡುವ ವಿಷಯಕ್ಕೆ ಸಂಬಂಧಿಸಿ ಗೊಂದಲ ಮುಂದುವರಿದಿದೆ. ಸುರತ್ಕಲ್ ಟೋಲ್‌ನಲ್ಲಿ ಸ್ಥಳೀಯ ಸಂಸದರ ಮೌಖಿಕ ಆದೇಶದ ಪ್ರಕಾರ ಆ.15ರ ತನಕ ಸ್ಥಳೀಯ ವಾಹನ ಮಾಲೀಕರಿಗೆ ವಿನಾಯಿತಿ ದೊರೆಯುತ್ತದೆ. ಆದರೆ ಬಳಿಕ ಈ ಸೌಲಭ್ಯ ಸ್ಥಳೀಯರಿಗೆ ದೊರೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಧಿಕೃತ ಆದೇಶ ಬರಬೇಕು ಎನ್ನುತ್ತಾರೆ ಟೋಲ್ ವ್ಯವಸ್ಥಾಪಕರು. ಹೆಜಮಾಡಿ ಮತ್ತು ಸಾಸ್ತಾನ ಟೋಲ್‌ಬೂತ್‌ಗಳಲ್ಲಿ ಸ್ಥಳೀಯರಿಗೆ ರಿಯಾಯಿತಿ ಮುಂದುವರಿಯುತ್ತದೆ ಎಂದು ಹೇಳಲಾಗಿದೆಯಾದರೂ ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆರ್‌ಸಿ, ಸ್ಥಳೀಯ ವಿಳಾಸ ದಾಖಲೆ ತೋರಿಸಿದರೆ ವಿನಾಯಿತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಫಾಸ್ಟ್ಯಾಗ್ ವ್ಯವಸ್ಥೆ ಕಡ್ಡಾಯವಾಗಿ ಆರಂಭಗೊಂಡ ಮೇಲಷ್ಟೇ ಈ ಬಗ್ಗೆ ನಿಖರತೆ ಸಿಗಬಹುದು.

ರಾಷ್ಟ್ರೀಯ ಹೆದ್ದಾರಿಯ ಎಲ್ಲ ಟೋಲ್‌ಗಳಲ್ಲಿ ಆ.15ರಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸಲು ಪೂರ್ಣ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಈ ಹೊಸ ವ್ಯವಸ್ಥೆ ಕಡ್ಡಾಯ ದಿನ ವಿಸ್ತರಣೆ ಸಂಬಂಧಿಸಿ ಸಚಿವಾಲಯದಿಂದ ಇಲ್ಲಿವರೆಗೆ ಯಾವುದೇ ನಮಗೆ ಯಾವುದೇ ನಿರ್ದೇಶನಗಳು ಬಂದಿಲ್ಲ.
– ಶಿಶು ಮೋಹನ್, ಯೋಜನಾ ನಿರ್ದೇಶಕ, ಎನ್‌ಎಚ್‌ಎಐ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا