Urdu   /   English   /   Nawayathi

ಮಾದಕ ದ್ರವ್ಯ ಸೇವನೆ: ಇಬ್ಬರು ವ್ಯಸನಿಗಳ ಬಂಧನ

share with us

ಮಂಗಳೂರು: 08 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಿಷೇಧಿಸಲ್ಪಟ್ಟ ಮಾದಕ ದ್ರವ್ಯ ಸೇವಿಸಿದ ಇಬ್ಬರು ಆರೋಪಿಗಳನ್ನು ನಗರದ ಪಣಂಬೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುರತ್ಕಲ್, ಮುಕ್ಕ ನಿವಾಸಿ ಮೊಹಮ್ಮದ್ ರಾಜಿಕ್ ಯಾನೆ ರಾಜಿಕ್ (32), ಚೇಳ್ಯಾರು ಎಮ್​ಆಎರ್​ಪಿಎಲ್​ ಕಾಲೋನಿ ನಿವಾಸಿ ನಿಖಿಲ್ (19) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ನಗರ ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸ್​ ಗೌಡ ಆರ್. ನೇತೃತ್ವದ ರೌಡಿ ನಿಗ್ರಹ ದಳ ಕಾರ್ಯಾಚರಣೆ ನಡೆಸಿದ್ದು, ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಗಾಗಿ ಆರೋಪಿಗಳ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಆರೋಪಿಗಳ ಮೇಲೆ ಎನ್​ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا