Urdu   /   English   /   Nawayathi

ಗದಗ: ಮಹಿಳೆಯರಿಗೆ ಉಚಿತ ಡ್ರಾಪ್ ಸೇವೆ ಪ್ರಾರಂಭಿಸಿದ ಪೊಲೀಸರು

share with us

ಗದಗ: 08 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಹೈದರಾಬಾದಿನಲ್ಲಿ ಪಶು ವೈದ್ಯೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಹಾಗೂ ಉನ್ನಾವೋದಲ್ಲಿ ಅತ್ಯಾಚಾರ ಸಂತ್ರಸ್ಥೆ ಮೇಲೆ ಬೆಂಕಿ ಹಚ್ಚಿದ ಘಟನೆಗಳ ಬೆನ್ನಲ್ಲೇ ಮಹಿಳೆಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಗದಗ್ ನಲ್ಲಿ ಮಹಿಳೆಯರಿಗೆ ಉಚಿತ ಡ್ರಾಪ್ ಸೇವೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ. ಸಹಾಯವಾಣಿ ಸಂಖ್ಯೆ ಅಥವಾ ಯಾವುದೇ ಪೊಲೀಸ್ ಠಾಣೆಗೆ ಮಹಿಳೆಯರು ಒಂದು ಕರೆ ಮಾಡಿದರೆ ಸಾಕು ಅವರು ತಲುಪಬೇಕಾದ ಸ್ಥಳಗಳಿಗೆ ಉಚಿತವಾಗಿ ಪಿಕ್ ಅಪ್  ಮತ್ತು ಡ್ರಾಪ್ ಸೇವೆಯನ್ನು  ನೀಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಷಿ ತಿಳಿಸಿದ್ದಾರೆ. ಗದಗ ಪೊಲೀಸರ ಈ ಕ್ರಮಕ್ಕೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ. ಮಹಿಳೆಯರ ರಕ್ಷಣೆ ನಿಟ್ಟಿನಲ್ಲಿ ಪೊಲೀಸರು ತೆಗೆದುಕೊಂಡಿರುವ ಕ್ರಮಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ANI@ANI

Karnataka: Gadag Police has started free drop service for women between 10 pm to 6 am. Srinath Joshi, SP Gadag says,"Women can call any police station or toll free helpline number. Police will pick them up and drop them off at their respective destinations." (7.12)

View image on TwitterView image on TwitterView image on TwitterView image on Twitter

1,438

12:19 PM - Dec 8, 2019

Twitter Ads info and privacy

328 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا