Urdu   /   English   /   Nawayathi

ಟ್ರಂಪ್​​ಗೆ ಮಹಾಭಿಯೋಗ​​ (ಅ)ಸಾಧ್ಯವೇ? ಹೇಗಿರುತ್ತೆ ಪ್ರಕ್ರಿಯೆ!

share with us

ವಾಷಿಂಗ್ಟನ್​​: 08 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೋಷಾರೋಪಣೆ ಮಾಡಲಾಗುವುದು ಎಂದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಗುರುವಾರ ಪ್ರಕಟಿಸಿದ್ದಾರೆ. ನಿರ್ದಿಷ್ಟವಾದ ಟೈಮ್​ಲೈನ್​ ಹೊರತುಪಡಿಸಿಯೂ ಸಹ ಪೆಲೋಸಿ ಟ್ರಂಪ್​​ಗೆ ದೋಷಾರೋಪಣೆ ಮಾಡುವ ಬಗ್ಗೆ ಗ್ರೀನ್​​ ಸಿಗ್ನಲ್​​ ನೀಡಿದ್ದಾರೆ.​

ಏನಿದು ಆರೋಪ?:
ಯು.ಎಸ್​​ ಕಾಂಗ್ರೆಸ್​​ನ ಅನಾಮದೇಯ ಮೂಲಗಳ ಪ್ರಕಾರ, ಟ್ರಂಪ್​​ ಉಕ್ರೇನಿಯನ್​​ ಅಧ್ಯಕ್ಷರ ಬಳಿ ಟ್ರಂಪ್​ನ ರಾಜಕೀಯ ಪ್ರತಿಸ್ಪರ್ಧಿಯಾಗಿರುವ ಜೋ ಬಿಡನ್​​ ಹಾಗೂ ಅವರ ಮಗ ಹಂಟರ್​​ ಬಗ್ಗ ತನಿಖೆ ನಡೆಸಲು ಸಹಾಯ ಕೋರಿದ್ದರು. ಉಕ್ರೇನ್​​ನ ಇಂಧನ ಕಂಪನಿಯೊಂದರಲ್ಲಿ ಹಂಟರ್​​ಗೆ ಸಂಬಂಧಿಸಿದಂತೆ ಬಡ್ಡಿ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಉಕ್ರೇನ್​​ಗೆ ನೀಡಲಾಗಿದ್ದ ಯು.ಎಸ್​​ ಮಿಲಿಟರಿ ಪಡೆಗೆ ಮೀಸಲಾಗಿದ್ದ 400 ಮಿಲಿಯನ್​ ಅಮೆರಿಕನ್​ ಡಾಲರ್​​(28 ಸಾವಿರ ಕೋಟಿ) ಅನುದಾನ ತಡೆಹಿಡಯಲಾಗಿತ್ತು. ಇದು ಅಮೆರಿಕದ ಕಾನೂನಿನ ಪ್ರಕಾರ ಅಪರಾಧವಾಗಿದೆ.

ಮುಂದೇನು?: ಈಗಾಗಲೇ ಸತತ ಬಹಿರಂಗ ವಿಚಾರಣೆ ನಡೆಸಿರುವ ಅಮೆರಿಕ ಕಾಂಗ್ರೆಸ್​​, ದೋಷಾರೋಪ ಪಟ್ಟಿಯನ್ನ ಸಿದ್ದಪಡಿಸಲಾಗಿದ್ದು, ಇದಕ್ಕೆ ಹೌಸ್​ ಆಫ್​​ ​ರೆಪ್ರೆಸೆಂಟೇಟಿವ್ಸ್​​ ಒಪ್ಪಿಗೆ ಪಡೆದರೆ, ಈ ನಿರ್ಣಯವನ್ನ ಸೆನೆಟ್​​ ಅಂಗೀಕಾರಕ್ಕೆ ಕಳುಹಿಸುವ ಸಾಧ್ಯತೆಗಳಿದೆ. ಸೆನೆಟ್​ನಲ್ಲೂ ದೋಷಾರೋಪ ಪಟ್ಟಿಗೆ ಅನುಮೋದನೆ ಸಿಕ್ಕರೆ ಟ್ರಂಪ್​​ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ. ಆದರೆ ಸೆನೆಟ್​​ನಲ್ಲಿ ಅಧ್ಯಕ್ಷ ಟ್ರಂಪ್​ಗೆ ಬಹುಮತವಿದೆ.

impeachment

ಇಂಪೀಚ್​​ಮೆಂಟ್​​ನ ಪ್ರಕ್ರಿಯೆ

ಇದು ಡೆಮಾಕ್ರಟ್ಸ್​​ಗಳಿಗೆ ಅನುಕೂಲವಾಗುತ್ತಾ?: ಅಮೆರಿಕದ ಇತಿಹಾಸದಲ್ಲಿ ಇಲ್ಲಿಯವರೆಗೆ ಆಂಡ್ರ್ಯೂ ಜಾನ್ಸನ್ ಮತ್ತು ಬಿಲ್ ಕ್ಲಿಂಟನ್ ಅವರನ್ನು ದೋಷಾರೋಪಣೆ ಮಾಡಲಾಗಿದೆ. ಆದರೆ, ಅವರು ಶಿಕ್ಷೆಗೊಳಗಾಗಲಿಲ್ಲ. ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಕ್ಲಿಂಟನ್ ಮತ್ತೆ ಆಯ್ಕೆಯಾದರು. ವಾಟರ್ ಗೇಟ್ ಹಗರಣದ ಹಿನ್ನೆಲೆಯಲ್ಲಿ ರಿಚರ್ಡ್ ನಿಕ್ಸನ್ ಅವರನ್ನು ದೋಷಾರೋಪಣೆ ಮಾಡುವ ಮೊದಲೇ ಅವರು ರಾಜೀನಾಮೆ ನೀಡಿದ್ದರು. 2020ರ ಚುನಾವಣೆಗೆಂದು ಸದ್ಯ ಅಧ್ಯಕ್ಷೀಯ ಅಭ್ಯಥಿಯನ್ನು ಹುಡುಕುತ್ತಿರುವ ಡೆಮಾಕ್ರಟ್ಸ್​​, ಟ್ರಂಪ್​ರ ಚಿತ್ರಣವನ್ನು ಕಳಂಕಿತಗೊಳಿಸಬಹುದು ಎಂದು ಹೇಳುವುದು ಕಷ್ಟ ಸಾಧ್ಯ. ಅದಲ್ಲದೇ ಡೆಮಾಕ್ರಟ್ಸ್​​ನ ಕಮಲಾ ಹ್ಯಾರಿಸ್​​ ಸಹ ಅಭ್ಯರ್ಥಿಗಳ ಪಟ್ಟಿಯಿಂದ ಹೊರಬಂದಿದ್ದು, ನ್ಯೂಯಾರ್ಕ್​ ನಗರದ ಮಾಜಿ ಮೇಯರ್​ ಹಾಗೂ ಮಾಧ್ಯಮ ಮಾಲೀಕರಾಗಿರುವ ಮೈಕೆಲ್​​ ಬ್ಲೂಮ್​ಬರ್ಗ್​ ಪ್ರವೇಶಿಸಿದ್ದಾರೆ. ಬ್ಲೂಮ್​ ಬರ್ಗ್​ ಈಗ ತಾನೆ ಪ್ರವೇಶ ಪಡೆದಿದ್ದು, ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಹೇಳಲು ಸಾಧ್ಯವಿಲ್ಲ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا