Urdu   /   English   /   Nawayathi

ಸಾಮಾನ್ಯ ಬಾಲಕಿಯ ಮನೆಗೆ ತೆರಳಿ ಮುತ್ತಿಟ್ಟ ಅಬುದಾಬಿ ದೊರೆ... ಕ್ರೌನ್​ ಪ್ರಿನ್ಸ್​​ ನಡೆಗೆ ನೆಟ್ಟಿಗರು ಸ್ಟನ್​!

share with us

ಅಬುದಾಬಿ:  05 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಒಂದು ದೇಶದ ಪ್ರತಿಷ್ಠೆ, ಗೌರವವನ್ನು ಆ ದೇಶವನ್ನು ಮುನ್ನಡೆಸುತ್ತಿರುವ ರಾಜ ಅಥವಾ ನಾಯಕನ ಗುಣಗಳಿಂದ ಅಳೆಯಬಹುದಂತೆ. ಇದಕ್ಕೆ ಇತಿಹಾಸದಲ್ಲಿ ಸಾಕಷ್ಟು ನಿದರ್ಶನಗಳನ್ನು ನಾವು ಕಾಣಬಹುದು. ಅಬುದಾಬಿ ರಾಜ ಶೇಖ್ ಮಹಮ್ಮದ್ ಜಾಯೆದ್‌ ಅವರ ಸರಳತೆ ಹಾಗೂ ಪ್ರಾಮಾಣಿಕತೆಗೆ ನೀವು ಬೆರಗಾಗಲೇ ಬೇಕು. ದೇಶದ ಅಧ್ಯಕ್ಷರ ಅರಮನೆಯಲ್ಲಿ ರಾಜನನ್ನು ಸ್ವಾಗತಿಸುವ ಸಂದರ್ಭದಲ್ಲಿ ಮಕ್ಕಳ ಕೈಕುಲುಕಿದ ಸಂದರ್ಭದಲ್ಲಿ ನಡೆದ ಅಚಾತುರ್ಯಕ್ಕೆ ಅವರು ಪ್ರತಿಕ್ರಿಯಿಸಿದ ರೀತಿ ಮಾತ್ರ ಅನುಕರಣೀಯವಾಗಿದೆ.

ಒಂದು ದೇಶದ ರಾಜನ ಕೈ ಕುಲುಕುವ ಅವಕಾಶವನ್ನು ಯಾರು ತಾನೆ ತಪ್ಪಿಸಿಕೊಳ್ತಾರೆ ಹೇಳಿ? ಅಬುದಾಬಿಯ ಅಧ್ಯಕ್ಷೀಯ ಅರಮನೆಯಲ್ಲಿ ರಾಜ ಶೇಖ್ ಮಹಮ್ಮದ್ ಜಾಯೆದ್‌ನನ್ನು ಪುಟಾಣಿ ಶಾಲಾ ಮಕ್ಕಳು ಬಹಳ ಖುಷಿಯಿಂದ ಸ್ವಾಗತಿಸುತ್ತಿದ್ದರು. ಈ ವೇಳೆ ರಾಜ ಜಾಯೆದ್‌ ಸರತಿ ಸಾಲಲ್ಲಿ ನಿಂತಿದ್ದ ಬಹುತೇಕ ಎಲ್ಲಾ ಮಕ್ಕಳ ಕೈ ಕುಲುಕಿದ್ದರು. ಆದ್ರೆ ಈ ಸಂದರ್ಭ ಆ ಮುದ್ದು ಮುಖದ ಪುಟ್ಟ ಬಾಲಕಿ ಐಶಾ ಅಲ್‌ ಮಜ್ರೋಯಿ ಕೂಡಾ ಅಷ್ಟೇ ಉತ್ಸಾಹದಿಂದ ರಾಜನ ಕೈ ಸ್ಪರ್ಶಿಸುವ ಕುತೂಹಲ ಹೊಂದಿದ್ದಳು. ರಾಜ ತನ್ನ ಹತ್ತಿರ ಬರುತ್ತಿರುವಾಗಲೇ ಉಳಿದ ಮಕ್ಕಳಂತೆ ಆಕೆ ಕೈ ಚಾಚಿದ್ಲು. ಆದ್ರೆ, ರಾಜ ಆಕೆಗೆ ಹ್ಯಾಂಡ್ ಶೇಕ್ ಮಾಡದೇ ಮುಂದೆ ಹೋಗಿಯೇ ಬಿಟ್ಟರು. ಆ ಬಾಲಕಿಯ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತ್ತು. ಮೊಗದಲ್ಲಿ ನಿರಾಶೆ ಎದ್ದು ಕಾಣುತ್ತಿತ್ತು. ಈ ವಿಚಾರ ರಾಜನಿಗೆ ಗೊತ್ತಾಗಿದೆ. ಅಮೇಲೇನಾಯ್ತು ಅನ್ನೋದು ಒಬ್ಬ ರಾಜನ ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯಂತಿದೆ.

ಈ ವಿಡಿಯೋವನ್ನು ಅಲ್ಲಿನ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಜಾಯೆದ್ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅರಿವಿಲ್ಲದ ತಪ್ಪು ನಡೆದು ಹೋಗಿದೆ. ರಾಜ ಟ್ವೀಟ್ ಮಾಡಿ ಸುಮ್ಮನಿರಬಹುದಿತ್ತೋ ಏನೋ? ಆದ್ರೆ ಅವರು ಹಾಗೆ ಮಾಡಲಿಲ್ಲ. ನಿರಾಸೆಗೊಂಡಿದ್ದ ಬಾಲಕಿಗೆ ಅಚ್ಚರಿ ಕಾದಿತ್ತು! ರಾಜ ನೇರವಾಗಿ ಬಾಲಕಿ ಐಶಾಳನ್ನು ಭೇಟಿಯಾಗಿದ್ದು ಆಕೆಯ ಹಣೆಗೆ ಮುತ್ತಿಟ್ಟು ಕುಟುಂಬ ಸದಸ್ಯರ ಕುಶಲೋಪರಿ ವಿಚಾರಿಸಿದ್ದಾರೆ. ಕೊನೆಗೂ ನಿರಾಸೆ ಮೊಗ ಹೊತ್ತ ಬಾಲಕಿಯ ಕಣ್ಣಲ್ಲಿ ಆನಂದಭಾಷ್ಟ ಹರಿದಿದೆ. ಬಾಲಕಿ ಕುಟುಂಬಸ್ಥರ ಜೊತೆ ನಿಂತು ಫೋಟೋ ತೆಗೆದು ಅವರನ್ನು ಮತ್ತಷ್ಟು ಖುಷಿಗೊಳಿಸಿದ್ದಾರೆ ರಾಜ. ಅಷ್ಚೇ ಅಲ್ಲ, ಈ ಫೋಟೋವನ್ನು ಶೇಖ್ ಮಹಮ್ಮದ್ ಜಾಯೆದ್‌ ಟ್ವಿಟ್ವರ್ ಖಾತೆಯಲ್ಲೂ ಶೇರ್ ಮಾಡಿದ್ದಾರೆ. ರಾಜ ಹಾಕಿದ ಈ ಫೋಟೋಗೆ ಈವರೆಗೆ 22 ಸಾವಿರ ಲೈಕುಗಳು ಬಂದಿದ್ದು, 8.3 ಸಾವಿರ ರಿಟ್ವೀಟ್‌ ಆಗಿದೆ. ಜಾಯೆದ್‌ ಮಾನವೀಯತೆ, ಪ್ರಜೆಗಳ ಬಗೆಗಿನ ಕಾಳಜಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬರ್ತಿದೆ. ರಾಜನ ಆಯುಷ್ಯ ವೃದ್ಧಿಸಲಿ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. What an adorable guesture ಅಲ್ವೇ?

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا