Urdu   /   English   /   Nawayathi

ನಾಸಾಗೂ ಅಸಾಧ್ಯವಾದ ವಿಕ್ರಮ್ ಲ್ಯಾಂಡರ್​ ಪತ್ತೆ ಮಾಡಿದ್ದು ಓರ್ವ ಭಾರತೀಯ..!

share with us

ವಾಷಿಂಗ್ಟನ್​/ನವದೆಹಲಿ: 03 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ವಿಕ್ರಮ್​ ಲ್ಯಾಂಡರ್ ಬಗ್ಗೆ ಇದ್ದ ಎಲ್ಲ ಗೊಂದಲಕ್ಕೆ ಅಮರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತೆರೆಎಳೆದಿದೆ. ನಾಸಾದ ಈ ಕಾರ್ಯಕ್ಕೆ ಮಹತ್ವದ ಮುನ್ನಡೆ ನೀಡಿದ್ದು ಓರ್ವ ಭಾರತೀಯ ಅದಕ್ಕಿಂತ ಹೆಚ್ಚಾಗಿ ನಮ್ಮ ಪಕ್ಕದ ತಮಿಳುನಾಡಿನ ಮೆಕ್ಯಾನಿಕಲ್ ಇಂಜಿನಿಯರ್​ ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ. 33 ವರ್ಷದ ಷಣ್ಮುಗ ಸುಬ್ರಹ್ಮಣ್ಯಂ ವಿಕ್ರಮ್ ಲ್ಯಾಂಡರ್ ಬಿದ್ದಿರಬಹುದಾದ ಸ್ಥಳವನ್ನು ಪತ್ತೆ ಮಾಡಿ ನಾಸಾಗೆ ಮಾಹಿತಿ ರವಾನಿಸಿದ್ದರು. ನಾಸಾ ಸಂಸ್ಥೆ ಸೆ.17ರಂದು ತೆಗೆಯಲ್ಪಟ್ಟಿದ್ದ ಮೋಸಾಯಿಕ್ ಫೋಟೋವನ್ನು ಸೆ.26 ರಿಲೀಸ್ ಮಾಡಿ ಹಳೆಯ ಹಾಗೂ ಹೊಸ ಫೋಟೋದಲ್ಲಿರಬಹುದಾದ ವ್ಯತ್ಯಾಸವನ್ನು ಗುರುತಿಸಲು ಸಾರ್ವಜನಿಕರ ಮುಂದಿಟ್ಟಿತ್ತು. ಇದೇ ಫೋಟೋಗಳನ್ನು ಆಧಾರವಾಗಿಸಿ ಷಣ್ಮುಗ ಸುಬ್ರಹ್ಮಣ್ಯಂ​​ ಅಧ್ಯಯನ ನಡೆಸಿದ್ದರು.

Vikram Lander

ಎರಡೂ ಪರಿಸ್ಥಿತಿಯ ಜಿಫ್​​ ವಿಡಿಯೋ

ಕೊನೆಗೂ ಪತ್ತೆಯಾದ 'ವಿಕ್ರಮ'...! ನಾಸಾದಿಂದ ಪೋಟೋ ರಿಲೀಸ್, ಅನುಮಾನಕ್ಕೆ ತೆರೆ

ಒಂದ ವಾರದಲ್ಲಿ ತಮಗೆ ತಿಳಿದು ಬಂದ ವಿಚಾರವನ್ನು ಷಣ್ಮುಗ ಸುಬ್ರಹ್ಮಣ್ಯಂ​​ ಟ್ವಿಟರ್ ಮೂಲಕ ಹಂಚಿಕೊಂಡಿದ್ದರು. ಇದರ ಬಗ್ಗೆ ನಾಸಾ ಸುದೀರ್ಘ ಎರಡು ತಿಂಗಳು ಅಧ್ಯಯನ ನಡೆಸಿ ಇದೀಗ ಷಣ್ಮುಗ ಮಾಹಿತಿ ಪೂರಕಾವಗಿತ್ತು ಎಂದು ನಾಸಾ ಅಧಿಕೃತವಾಗಿ ಹೇಳಿದೆ. ತಮ್ಮ ಅಧ್ಯಯನ ಪ್ರಕಾರ ವಿಕ್ರಮ್ ಲ್ಯಾಂಡರ್​​ ನಿರ್ದಿಷ್ಟ ಲ್ಯಾಂಡಿಂಗ್ ಪ್ರದೇಶದಿಂದ 750 ಅಡಿ ವಾಯುವ್ಯದಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿತ್ತು ಎಂದು ಷಣ್ಮುಗ ಸುಬ್ರಹ್ಮಣ್ಯಂ​​ ನಾಸಾಗೆ ಮಾಹಿತಿ ನೀಡಿ ಲ್ಯಾಂಡರ್ ಪತ್ತೆಗೆ ಪೂರಕ ಮಾಹಿತಿ ನೀಡಿದ್ದರು.

ಲ್ಯಾಂಡಿಂಗ್​​ ಮುನ್ನ ಹಾಗೂ ನಂತರದ ಎರಡು ಫೋಟೋವನ್ನು ನನ್ನ ಎರಡು ಲ್ಯಾಪ್​ಟಾಪ್​ನಲ್ಲಿ ನೋಡುತ್ತಾ ಲ್ಯಾಂಡರ್ ಬಗ್ಗೆ ಅಧ್ಯಯನ ನಡೆಸಿದೆ. ಇದು ನಿಜಕ್ಕೂ ಅತಿ ಕಠಿನ ಸವಾಲಾಗಿತ್ತು,. ನನ್ನದೇ ಆದ ಪ್ರಯತ್ನದಲ್ಲಿ ಲ್ಯಾಂಡರ್ ಬಗ್ಗೆ ಒಂದಷ್ಟು ಮಾಹಿತಿ ಲಭ್ಯವಾಯಿತು ಎಂದು ಷಣ್ಮುಗ ಸುಬ್ರಹ್ಮಣ್ಯಂ ಸುದ್ದಿಸಂಸ್ಥೆ ಮಾಹಿತಿ ನೀಡಿದ್ದಾರೆ. ಷಣ್ಮುಗ ಸುಬ್ರಹ್ಮಣ್ಯಂ​ ನೀಡಿದ ಮಾಹಿತಿಯನ್ನು ಪರಿಗಣಿಸಿದ್ದ ನಾಸಾ ಅದೇ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿತ್ತು. ಶಂಕರ್ ಹೇಳಿದಂತೆ ಸದ್ಯ ಲ್ಯಾಂಡರ್ ಅದೇ ಪ್ರದೇಶದಲ್ಲಿ ಕ್ರ್ಯಾಶ್ ಲ್ಯಾಂಡ್ ಆದ ಬಗ್ಗೆ ನಾಸಾ ಅಧಿಕೃತ ಪ್ರಕಟಣೆ ಹೊರಡಿಸಿದೆ.

ನಾಸಾದಿಂದ ಮೆಚ್ಚುಗೆಯ ಪತ್ರ: ಷಣ್ಮುಗ ಸುಬ್ರಹ್ಮಣ್ಯಂ​ ಅವರ ಕಾರ್ಯದಿಂದ ನಾಸಾದ ಅಧ್ಯಯನಕ್ಕೆ ಮತ್ತಷ್ಟು ವೇಗ ಬಂದಿತ್ತು. ಹೀಗಾಗಿ ನಾಸಾ ಮೇಲ್ ಮುಖಾಂತರ ಶಣ್ಮುಗ ಅವರಿಗೆ ಮೆಚ್ಚುಗೆಯ ಪತ್ರವನ್ನು ಕಳುಹಿಸಿದೆ. ಈ ಪತ್ರವನ್ನು ಶಂಕರ್​​ ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

 ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا