Urdu   /   English   /   Nawayathi

ಸಿಲಿಕಾನ್ ಸಿಟಿ ಪೋಲೀಸರ ಕಾರ್ಯಾಚರಣೆ-ಬಾಲಕನ ಅಪಹರಿಸಿದ್ದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು

share with us

ಬೆಂಗಳೂರು: 02 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಅಪಹರಣಕಾರನೋರ್ವನ ಮೇಲೆ ಪೊಲೀಸರು ಗುಂಡಿನ ದಾಳಿ‌ ನಡೆಸಿ, ಬಾಲಕನನ್ನು ರಕ್ಷಿಸಿರುವ ಘಟನೆ ನಗರದ ಹೆಣ್ಣೂರು ಬಳಿಯ ಸಾರಾಯಿಪಾಳ್ಯದಲ್ಲಿ ನಡೆದಿದೆ. ಆರೋಪಿ ಮುಬಾರಕ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಶನಿವಾರ ಮಧ್ಯಾಹ್ನ ಆರೋಪಿಗಳು ನಗರದ ಹೊಟೇಲ್ ಮಾಲೀಕನೋರ್ವನ 13 ವರ್ಷದ ಮಗನನ್ನು ಚಾಕು ತೋರಿಸಿ ಆಟೋದಲ್ಲಿ ಅಪಹರಿಸಿದ್ದರು. ನಂತರ ಬಾಲಕ ಮೊಬೈಲ್ ನಿಂದಲೇ ಆತನ ಪೋಷಕರಿಗೆ ಕರೆ ಮಾಡಿ, 50 ಲಕ್ಷ ರೂ ಬೇಡಿಕೆ ಇಟ್ಟಿದ್ದರು. ಇತ್ತ ಪೋಷಕರು ಸಂಜೆಯಾದರೂ ಬಾಲಕ ಮನೆಗೆ ವಾಪಾಸಾಗದ್ದನ್ನು ಕಂಡು ಬಾಣಸವಾಡಿ ಪೋಲೀಸರಲ್ಲಿ ದೂರು ನೀಡಿದ್ದಾರೆ. ಅಪಹರಣಕಾರರಿಂದ ಕರೆ ಸ್ವೀಕರಿಸಿದ ಮಾಹಿತಿ ಪಡೆದ ಪೋಲೀಸರು ಡಿಸಿಪಿ ಡಾ.ಶರಣಪ್ಪ ಅವರು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಮತ್ತು ಬಾಣಸವಾಡಿ ಇನ್ಸ್‍ಪೆಕ್ಟರ್‍ಗಳ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಜಾಲ ಹೆಣೆದಿದ್ದಾರೆ. ಆರೋಪಿಗಳು ಬಾಲಕನನ್ನು ವಾಹನದಲ್ಲಿ ಕುಳ್ಳರಿಸಿಕೊಂಡು ನಗರವನ್ನೆಲ್ಲಾ ಸುತ್ತಿದ್ದಾರೆ ಎನ್ನುವ ಮಾಹಿತಿ ಅಲ್ಲದೆ ಸ್ವಲ್ಪ ಸಮಯದಲ್ಲೇ ಹೆಣ್ಣೂರು ವ್ಯಾಪ್ತಿಯ ನಾರಾಯಣಪುರಕ್ಕೆ ಆಗಮಿಸುವ ಮಾಹಿತಿ ಪಡೆದ ಪೋಲೀಸರು ಜಾಗೃತರಾಗಿದ್ದರು. ಆರೋಪಿಗಳ ಬಂಧನಕ್ಕೆ ಮುಂದಾದ ಪೋಲೀಸರ ಮೇಲೆ ಆರೋಪಿ ಥಣಿಸಂದ್ರದ ಮುಬಾರಕ್ (28)  ಹಲ್ಲೆ ನಡೆಸಿದ್ದಾನೆ.ಆಗ ಡ್‍ಕಾನ್‍ಸ್ಟೆಬಲ್ ರೇಣುಕಾನಾಯಕ್ ಗಾಯಗೊಂಡಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಪೋಲೀಸರು ಮುಬಾರಕ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ನೀಡಿದ ಸುಳಿವಿನ ಮೇಲೆ ದುಷ್ಕರ್ಮಿಗಳ ತಂಡದ ಇನ್ನಿಬ್ಬರು ಸದಸ್ಯರನ್ನು ( ಥಣಿಸಂದ್ರದ ಅಯಾಝ್ ಹಾಗೂ ಕಮ್ಮನಹಳ್ಳಿಯ ಮೊಹಿನ್‍ನನ್ನು (29) ಬಂಧಿಸಿದ್ದಾರೆ. ಅದರಲ್ಲಿ ಓರ್ವನು ಬಾಲಕನ ಸಂಬಂಧಿ ಎಂದೂ ಪತ್ತೆಯಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا