Urdu   /   English   /   Nawayathi

ಅನುದಾನ ರಕ್ಷಣೆಗಾಗಿ ಸರ್ಕಾರ ರಚನೆ 'ಡ್ರಾಮಾ': ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಪ್ರಧಾನಿ ಮೋದಿಗೆ ಕಾಂಗ್ರೆಸ್ ಆಗ್ರಹ

share with us

ನವದೆಹಲಿ: 02 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿದ್ದ ಅನುದಾನ ರಕ್ಷಣೆಗಾಗಿ ದೇವೇಂದ್ರ ಫಡ್ನವೀಸ್ ಅವರಿಂದ ಸರ್ಕಾರ ರಚನೆ ಡ್ರಾಮಾ ಮಾಡಿತ್ತು ಬಿಜೆಪಿ ಎಂಬ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಕಾಂಗ್ರೆಸ್ ಸೋಮವಾರ ಆಗ್ರಹಿಸಿದೆ. ಅನಂತ್ ಕುಮಾರ್ ಹೆಗಡೆ ಹೇಳಿಕೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ ರಹಸ್ಯ ಪೆಟ್ಟಿಗೆಯನ್ನು ಕೇಂದ್ರ ಸಚಿವರು ಬಹಿರಂಗಪಡಿಸಿದ್ದಾರೆ. ಬಿಜೆಪಿ ಪಕ್ಷದ ಮಹಾರಾಷ್ಟ್ರ ವಿರೋಧಿ ಮುಖವನ್ನು ಜನತೆ ಮುಂದೆ ಬಿಚ್ಚಿಟ್ಟಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನು ದರೋಡೆ ಮಾಡಲಾಗಿದೆಯೇ? ರೈತರ ಕಲ್ಯಾಣ ಹಾಗೂ ಸಾರ್ವಜನಿಕರ ಕಲ್ಯಾಣಕ್ಕಾಗಿದ್ದ ರೂ.40,000 ಕೋಟಿ ಹಣದ ಹಿಂದೆ ಪಿತೂಯಿ ಏನಾದರೂ ನಡೆದಿದೆಯೇ? ಹೆಗಡೆ ಹೇಳಿಕೆ ಕುರಿತು ಪ್ರಧಾನಿ ಮೋದಿ ಕೂಡಲೇ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆ ಹೇಳಿಕೆ ನೀಡಿದ್ದ ಅನಂತ್ ಕುಮಾರ್ ಹೆಗಡೆಯವರು, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಅವರು 80 ಗಂಟೆಗಳ ಮುಖ್ಯಮಂತ್ರಿಯಾಗಿರುವುದು ಮತ್ತು ರಾಜೀನಾಮೆ ನೀಡಿದ್ದು ನಿಮಗೆಲ್ಲರಿಗೂ ತಿಳಿದಿದೆ. ಬಹುಮತ ಿಲ್ಲದೇ ಇದ್ದರೂ ಮುಖ್ಯಮಂತ್ರಿ ಆಗಿದ್ದೇಕೆ ಎಂದು ಹಲವರು ಪ್ರಶ್ನಿಸಿದ್ದರು. ಬಹುಮತ ಇಲ್ಲವೆಂಬುದು ನಮಗೆ ಗೊತ್ತಿತ್ತು. ಆದರೆ, ಮಹಾರಾಷ್ಟ್ರದ ಖಜಾನೆಯಲ್ಲಿರುವ ನಿಧಿಯನ್ನು ರಕ್ಷಿಸುವುದಕ್ಕಾಗಿ ಈ ರೀತಿಯ ನಾಟಕವಾಡಬೇಕಾಯಿತು ಎಂದು ಹೇಳಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಫಡ್ನವೀಸ್ ಅವರಿಗೆ ಕೇಂದ್ರದ ಸುಮಾರು ರೂ.40,000 ಕೋಟಿ ಅನುದಾನ ಬಳಕೆಯ ಅಧಿಕಾರವಿತ್ತು. ಆದರೆ, ಕಾಂಗ್ರೆಸ್-ಎನ್'ಸಿಪಿ ಮತ್ತು ಶಿವಸೇನೆ ಸರ್ಕಾರ ರಚನೆಯಾದರೆ ಅಭಿವೃದ್ಧಿಗಾಗಿ ಬಂದಿದ್ದ ಅನುದಾನ ದುರ್ಬಳಕೆಯಾಗುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಹೀಗಾಗಿ ಅಲ್ಲೊಂದು ನಾಟಕ ಸೃಷ್ಟಿಯಾಗಿತ್ತು. ಫಡ್ನವೀಸ್ ಅವರು 15 ಗಂಟೆಗಳ ಮುಖ್ಯಮಂತ್ರಿಯಾದರು, ರೂ.40,000 ಕೋಟಿ ಅನುದಾನವನ್ನು ಕೇಂದ್ರಕ್ಕೆ ಹಿಂತಿರುಗಿಸಿದರು ಎಂದಿದ್ದರು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا