Urdu   /   English   /   Nawayathi

10 ವರ್ಷಗಳಲ್ಲಿ 2017-18ರ ರೈಲ್ವೆ ಕಾರ್ಯಾಚರಣೆ ಕಳಪೆ: ಸಿಎಜಿ ವರದಿ

share with us

ನವದೆಹಲಿ: 02 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಭಾರತೀಯ ರೈಲ್ವೆಯ ಕಾರ್ಯಾಚರಣಾ ಅನುಪಾತವು 2017-18ರಲ್ಲಿ ಶೇ. 98.44ರಷ್ಟಿದ್ದು, ಕಳೆದ 10 ವರ್ಷಗಳಲ್ಲಿ ಇದು ಅತ್ಯಂತ ಕೆಟ್ಟದಾಗಿದೆ ಎಂದು ರಾಷ್ಟ್ರೀಯ ಮಹಾಲೇಖಪಾಲರ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಸಂಸತ್ತಿನಲ್ಲಿ ತನ್ನ ವರದಿ ಮಂಡಿಸಿದೆ. ಆದಾಯ ಕಾರ್ಯಾಚರಣಾ ಅನುಪಾತವು ರೈಲ್ವೆಯು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅದರ ಹಣಕಾಸು ಎಷ್ಟು ಆರೋಗ್ಯಕರವಾಗಿದೆ ಎಂಬುದನ್ನು ತೋರಿಸುತ್ತದೆ. ಶೇ. 98.44ರಷ್ಟು ಕಾರ್ಯಾಚರಣೆ ಎಂದರೆ ರೈಲ್ವೆಯು 100 ರೂ. ಗಳಿಸಲು 98.44 ರೂ. ಖರ್ಚು ಮಾಡಬೇಕಾಗುತ್ತದೆ. 1,665.61 ಕೋಟಿ ರೂ. ಹೆಚ್ಚುವರಿ ಬದಲು ರೈಲ್ವೆಯು 5,676.29 ಕೋಟಿ ರೂ. ಋಣಾತ್ಮಕ ಬಾಕಿ ಉಳಿಸಿಕೊಂಡಿರಬಹುದು. ಮುಂಗಡ ಹೊರತುಪಡಿಸಿದರೆ ಕಾರ್ಯಾಚರಣಾ ಅನುಪಾತ ಶೇ. 102.66ಕ್ಕೆ ಹೆಚ್ಚಿಸಬಹುದು ಎಂದು ಸಿಎಜಿ ಹೇಳಿದೆ. ಭಾರತೀಯ ರೈಲ್ವೆಯು ತನ್ನ ಪ್ರಯಾಣಿಕರ ಮತ್ತು ಇತರ ಕೋಚಿಂಗ್ ಸೇವೆಗಳ ನಿರ್ವಹಣಾ ವೆಚ್ಚವನ್ನು ಪೂರೈಸಲು ಸಾಧ್ಯವಾಗಿಲ್ಲ. ಈ ಎರಡೂ ಸೇವೆಗಳ ಕಾರ್ಯಾಚರಣೆಯಲ್ಲಿನ ನಷ್ಟ ಸರಿದೂಗಿಸಲು ಸರಕು ಸಾಗಣೆಯಿಂದ ಬರುವ ಲಾಭದ ಸುಮಾರು 95 ಪ್ರತಿಶತವನ್ನು ಬಳಸಿಕೊಳ್ಳಲಾಗಿದೆ. ಪ್ರಯಾಣಿಕರಿಗೆ ನೀಡಲಾದ ರಿಯಾಯಿತಿಗಳ ಪ್ರಭಾವ ವಿಶ್ಲೇಷಿಸಿದಾಗ ಆದಾಯವು ಶೇ. 89.7ರಷ್ಟಿದೆ ಎಂದು ತಿಳಿದುಬಂದಿದೆ. ಪಾಸ್​ಗಳ ದುರುಪಯೋಗ ಮತ್ತು ವೈದ್ಯಕೀಯ ಪ್ರಮಾಣಪತ್ರಗಳಲ್ಲಿ ಅನಿಯಮಿತ ರಿಯಾಯಿತಿಗಳನ್ನು ನೀಡಿದ ಹಲವು ಅಂಶಗಳು ಗಮನಕ್ಕೆ ಬಂದಿವೆ. ಪ್ರಯಾಣಿಕರ ರಿಸರ್ವೇಷನ್​ ವ್ಯವಸ್ಥೆ, ಸ್ವಾತಂತ್ರ್ಯ ಹೋರಾಟಗಾರರ ವಯಸ್ಸಿನ ಮೌಲ್ಯೀಕರಣ, ಸವಲತ್ತುಗಳ ಪಾಸ್​​ನಲ್ಲಿ ಸಾಕಷ್ಟು ಕ್ರಮಬದ್ಧತೆ ಹೊಂದಿಲ್ಲ ಎಂದು ಸಿಎಜಿ ಹೇಳಿದೆ. ಭಾರತೀಯ ರೈಲ್ವೆಯ ಹಣಕಾಸು ಖಾತೆಗಳ ಲೆಕ್ಕಪರಿಶೋಧನೆಯ ವಿಶ್ಲೇಷಣೆಯು ಆದಾಯದ ಹೆಚ್ಚುವರಿ ಕುಸಿತ ಮತ್ತು ಬಂಡವಾಳ ವೆಚ್ಚದಲ್ಲಿ ಆಂತರಿಕ ಸಂಪನ್ಮೂಲಗಳ ಪಾಲನ್ನು ಬಹಿರಂಗಪಡಿಸಿದೆ. ನಿವ್ವಳ ಆದಾಯದ ಹೆಚ್ಚುವರಿಯು 2016-17ರಲ್ಲಿ 4,913.00 ಕೋಟಿ ರೂ.ಗಳಿಂದ ಶೇ. 66.10ರಷ್ಟು ಇಳಿಕೆಯಾಗಿದ್ದು, 2017-18ರಲ್ಲಿ 1,665.61 ಕೋಟಿ ರೂ.ಗೆ ತಲುಪಿದೆ ಎಂದು ಹೇಳಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا